ಶಿವಮೊಗ್ಗ: ಫೈನಾನ್ಸ್ ನವರ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿರುವ ಬೆನ್ನಲ್ಲೇ ವ್ಯಕ್ತಿಯೋರ್ವ ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಿರೇಎಡಗೋಡು ಗ್ರಾಮದಲ್ಲಿ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ (48) ಮೃತ ವ್ಯಕ್ತಿ.
ಖಾಸಗಿ ವ್ಯಕ್ತಿಯ ಬಳಿ 5 ಸಾವಿರ ರೂಪಾಯಿ ಸಾಲ ಪಡೆದಿದ್ದರು. 5 ಸಾವಿರ ರೂ.ಅಸಲಿಗೆ ಬಡ್ಡಿ ಸೇರಿದಂತೆ 9 ಸಾವಿರ ರೂಪಾಯಿ ನೀಡುವಂತೆ ಸಾಲ ಕೊಟ್ಟ ವ್ಯಕ್ತಿ ಕೇಳಿದ್ದ. ಸಾಲ ಹಿಂದಿರುಗಿಸದ ಕಾರಣ ಮಹೇಶ್ ಬಳಿ ಇದ್ದ ಬೈಕ್ ನ್ನು ಎತ್ತಿಕೊಂಡು ಹೋಗಿದ್ದ. ಇದರಿಂದ ಅವಮಾನ ತಾಳಲಾರದೇ ಮಹೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.