ಶಿವಮೊಗ್ಗ: ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ 1 ಮತ್ತು ಆಗುಂಬೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 2 ಪ್ರಕರಣಗಳನ್ನು ದಾಖಲಿಸಲಾಗಿದೆ.
ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಒಟ್ಟು 254 ವಾಹನಗಳನ್ನು(227 ದ್ವಿ ಚಕ್ರ ವಾಹನಗಳು, 3 ಆಟೋಗಳು ಮತ್ತು 24 ಕಾರುಗಳನ್ನು) ವಶಪಡಿಸಿಕೊಳ್ಳಲಾಗಿದೆ. IMV ಕಾಯ್ದೆ ಅಡಿಯಲ್ಲಿ ಒಟ್ಟು 305 ಪ್ರಕರಣಗಳನ್ನು ದಾಖಲಿಸಿ 1,33,200 ರೂ. ದಂಡ ವಿಧಿಸಲಾಗಿದೆ.