
ಶಿವಮೊಗ್ಗ: ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಪತ್ನಿ ಮೇಲೆ ಪತಿ ಮಹಾಶಯ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದಲ್ಲಿ ನಡೆದಿದೆ.
ಪತಿ ಕಿರಣ್ ಹಾಗೂ ಆತನ ಕುಟುಂಬಸ್ಥರು ಪತ್ನಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಮನಬಂದಂತೆ ಹೊಡೆದಿದ್ದು, ಮುಖದ ಮೇಲೂ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಹುಟ್ಟಿದ ಹೆಣ್ಣುಮಗವನ್ನು ಕೊಲ್ಲಲು ಕಿರಣ್ ಯತ್ನಿಸಿದ್ದಾನೆ.
ಗಂಭೀರವಾಗಿ ಹಲ್ಲೆಗೊಳಗಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಕಿರಣ್ ಹಾಗೂ ಆತನ ಪೋಷಕರು, ಸಹೋದರಿ ವಿರುದ್ಧ ಪ್ರಕರಣ ದಾಖಲಾಗಿದೆ.