ಶಿವಮೊಗ್ಗ: ಸ್ಪೆಲ್ಲಿಂಗ್ ಮಿಸ್ಟೇಕ್ ನಿಂದಾಗಿ ದುಬೈ ವಿಮಾನ ಪ್ರಯಾಣವೇ ರದ್ದಾದ ಘಟನೆ ನಡೆದಿದೆ. ಕೋವಿಡ್ ನೆಗೆಟಿವ್ ಪ್ರಮಾಣಪತ್ರದಲ್ಲಿ Shivamogga ಎಂಬುದರ ಬದಲಿಗೆ Shimoga ಎಂದು ನಮೂದಾಗಿದ್ದರಿಂದ ಮಹಿಳೆಯೊಬ್ಬರ ವಿಮಾನ ಪ್ರಯಾಣ ರದ್ದಾಗಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಚಾಂದ್ ಬೇಗಂ ಅವರು ಕಳೆದ ಶನಿವಾರ ಮಂಗಳೂರು ಮೂಲಕ ದುಬೈಗೆ ಪ್ರಯಾಣಿಸಬೇಕಿತ್ತು. ಅವರು ಪಡೆದುಕೊಂಡಿದ್ದ ಕೋವಿಡ್ ಟೆಸ್ಟ್ ಪ್ರಮಾಣಪತ್ರದಲ್ಲಿ Shivamogga ಎಂಬುದರ ಬದಲಿಗೆ Shimoga ಎಂದು ಬರೆಯಲಾಗಿತ್ತು. ಹೀಗಾಗಿ ಸ್ಪೈಸ್ ಜೆಟ್ ಅಧಿಕಾರಿಗಳು ಬೋರ್ಡಿಂಗ್ ಪಾಸ್ ನೀಡಲು ನಿರಾಕರಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಅಧಿಕಾರಿಗಳು ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಈ ಬಗ್ಗೆ ಸ್ಪಷ್ಟನೆ ನೀಡಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲವೆಂದು ಹೇಳಲಾಗಿದೆ.