
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ರಂಗಪ್ಪ ಸರ್ಕಲ್ ನಲ್ಲಿ ನಕಲಿ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತರೀಕೆರೆಯ ಅರುಣ್ ಕುಮಾರ್(23) ಮತ್ತು ಶಿವಮೊಗ್ಗದ ಹರಿಗೆಯ ಪ್ರೇಮರಾಜ್ (23) ಬಂಧಿತ ಆರೋಪಿಗಳು. ಇವರು ರಂಗಪ್ಪ ಸರ್ಕಲ್ ನಲ್ಲಿ 500 ರೂ. ಮುಖಬೆಲೆಯ ನಕಲಿ ನೋಟುಗಳ ಚಲಾವಣೆ ಯತ್ನಿಸಿದ ವೇಳೆ ಭದ್ರಾವತಿ ಹಳೆನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರಿಂದ 500 ರೂಪಾಯಿ ಮುಖಬೆಲೆಯ 182 ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ನಕಲಿ ನೋಟು ತಯಾರಿಕೆಗೆ ಬಳಸಿದ ಪ್ರಿಂಟರ್ ಕೂಡ ವಶಕ್ಕೆ ಪಡೆಯಲಾಗಿದ್ದು, ಭದ್ರಾವತಿ ಹಳೆನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇವರು ಈ ಹಿಂದೆ ನಕಲಿ ನೋಟು ಚಲಾವಣೆ ಮಾಡಿರುವ ಸಾಧ್ಯತೆ ಹಿನ್ನಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.