ಶಿವಮೊಗ್ಗ : ಶಿವಮೊಗ್ಗ ದಸರಾಗೆ ಬಂದು ಆನೆ ( ನೇತ್ರಾವತಿ) ಮರಿ ಹಾಕಿದ ಹಿನ್ನೆಲೆ ಕೊನೇ ಕ್ಷಣದಲ್ಲಿ ಜಂಬೂಸವಾರಿ ರದ್ದಾಗಿದೆ.
ಶಿವಮೊಗ್ಗದಲ್ಲಿ ಇಂದು ಅದ್ಧೂರಿಯಾಗಿ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ನಡುವೆ ಶಿವಮೊಗ್ಗ ದಸರಾ ಉತ್ಸವಕ್ಕೆ ಆಗಮಿಸಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಹಿನ್ನೆಲೆ ಕೊನೇ ಕ್ಷಣದಲ್ಲಿ ಜಂಬೂಸವಾರಿ ರದ್ದಾಗಿದೆ. ತೆರೆದ ಅಲಂಕೃತ ವಾಹನದಲ್ಲಿ ನಾಡದೇವಿ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ತೆರೆದ ಮೆರವಣಿಗೆಯಲ್ಲಿ ವಾಹನದ ಮುಂಭಾಗದಲ್ಲಿ ಸಾಗರ್ ಹಾಗೂ ಹೇಮಾವತಿ ಆನೆಗಳು ಸಾಗಲಿದೆ.
ಉತ್ಸವದಲ್ಲಿ ಭಾಗಿಯಾಗಲು ಬಂದಂತಹ ನೇತ್ರಾವತಿ ಆನೆ ಕಳೆದ ರಾತ್ರಿಯೇ ಹೆಣ್ಣು ಮರಿಗೆ ಜನ್ಮ ನೀಡಿದೆ. ಸದ್ಯ, . ನೇತ್ರಾವತಿ ಆನೆಯನ್ನ ಸಕ್ರೆಬೈಲು ಕ್ಯಾಂಪ್ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಆನೆ ಗರ್ಭಿಣಿಯಾಗಿದೆ ಎಂದು ತಿಳಿದಿದ್ದರೂ ಕೂಡ ಸಕ್ರೆಬೈಲ್ ಬಿಡಾರದಿಂದ ಗರ್ಭಿಣಿ ಆನೆಯನ್ನ ಕರೆತರಲಾಗಿತ್ತು. ತುಂಬು ಗರ್ಭಿಣಿಯಾದಂತಹ ಆನೆಗಳನ್ನು ದಸರಾ ಕಾರ್ಯಕ್ರಮಕ್ಕೆ ಕರೆತಂದಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.