alex Certify ಶಿವಮೊಗ್ಗ: ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಆನೆ ‘ಗಂಗಾ’ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ: ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಆನೆ ‘ಗಂಗಾ’ ಸಾವು

ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರದ ಹಿರಿಯ ಹಾಗೂ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆ  ಗಂಗಾ(85) ವಯೋಸಹಜ ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದೆ.

ರಾಜ್ಯದ ಎಂಟು ಆನೆಬಿಡಾರಗಳಲ್ಲಿ ಗಂಗಾ ಹಿರಿಯಳು. 1971ರಲ್ಲಿ ಕಾಕನಕೋಟೆಯಲ್ಲಿ ನಡೆದಿದ್ದ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕಿದ್ದ ಗಂಗಾಳನ್ನು ನಂತರ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಬಳಸಿಕೊಳ್ಳಲಾಗುತಿತ್ತು.

ಗಂಗಾ ಕಳೆದು ಹಲವು ವರ್ಷಗಳ ಕಾಲ ಶಿವಮೊಗ್ಗ ದಸರಾದಲ್ಲಿ ಜಂಬೂ ಸವಾರಿಯಲ್ಲಿ ಭಾಗಿಯಾಗಿದ್ದಳು. ಆದರೆ, ಕಳೆದ ಎರಡು ವರ್ಷಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುವುದರಿಂದ ನಿವೃತ್ತಿ ನೀಡಲಾಗಿತ್ತು.

ಗಂಗಾ ಸಾವಿನ ಬಳಿಕ ಸಕ್ರೆಬೈಲು ಆನೆಬಿಡಾರದಲ್ಲಿ ಪ್ರಸ್ತುತ 20 ಆನೆಗಳು ಉಳಿದಿವೆ. ಅದರಲ್ಲಿ 16 ಗಂಡು, 4 ಹೆಣ್ಣಾನೆಗಳು ಇವೆ.

80-85 ವರ್ಷವಾಗಿದ್ದ ಗಂಗಾಗೆ ಕಳೆದ ಎರಡು ವರ್ಷಗಳಿಂದ ಆರೋಗ್ಯ ಸಂಬಂಧಿ ನಾನಾ ಸಮಸ್ಯೆಗಳು ಕಾಡಲಾರಂಭಿಸಿವೆ. ಅದರಲ್ಲೂ ಇತ್ತೀಚೆಗಂತೂ ದೇಹ ಇನ್ನಷ್ಟು ಬತ್ತಿತ್ತು. ತಿಂದಿದ್ದು ಹೊಟ್ಟೆಯಲ್ಲಿ ನಿಲ್ಲುತ್ತಿರಲಿಲ್ಲ. ಕಾಲಿನಲ್ಲಿ ಊತ. ಈ ಕಾರಣಗಳಿಂದಾಗಿ ಗಂಗಾಳನ್ನು 15 ದಿನಗಳಿಂದ ಕ್ರಾಲ್ ನಲ್ಲೇ ಆರೈಕೆ ಮಾಡಲಾಗುತಿತ್ತು. ಅಲ್ಲಿಯೇ ಅಗತ್ಯ ಆಹಾರ ಪೂರೈಸಲಾಗುತಿತ್ತು. ಭಾನುವಾರ ಬೆಳಗ್ಗೆ ಕುಳಿತುಕೊಂಡಲ್ಲೆ ಅಸುನೀಗಿದೆ.

ಅತ್ಯಂತ ಸೌಮ್ಯ ಸ್ವಭಾವದ ಮಾತೃಹೃದಯದ ಗಂಗಾ ನಿಧನ ಹೊಂದಿದ್ದು, ಸಕ್ರೆಬೈಲಿನ ಕ್ರಾಲ್ ನಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...