alex Certify ವರುಣಾರ್ಭಟಕ್ಕೆ ಡ್ಯಾಂಗಳು ಭರ್ತಿ: ಜೀವಕಳೆ ಪಡೆದುಕೊಂಡ ಜಲಾಶಯಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರುಣಾರ್ಭಟಕ್ಕೆ ಡ್ಯಾಂಗಳು ಭರ್ತಿ: ಜೀವಕಳೆ ಪಡೆದುಕೊಂಡ ಜಲಾಶಯಗಳು

ಶಿವಮೊಗ್ಗ: ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿವೆ.

ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯಲ್ಲಿನ ಪ್ರಮುಖ ಜಲಾಶಯಗಳು ಜೀವಕಳೆ ಪಡೆದುಕೊಂಡಿವೆ.

ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ 33 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಗಾಜನೂರಿನಲ್ಲಿ ಡ್ಯಾಂನ ಗೇಟ್ ಗಳನ್ನು ಅರ್ಧ ಮೀಟರ್ ನಷ್ಟು ಎತ್ತರಿಸಿ ನದಿಗೆ ನೀರು ಬಿಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿನ ಮಂಟಪ ಮುಳುಗಡೆಯಾಗಲು ಇನ್ನು ಒಂದೇ ಅಡಿ ಮಾತ್ರ ಬಾಕಿ ಇದೆ.

ಭದ್ರಾ ಜಲಾಶಯದಿಂದ 16 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಭದ್ರಾ ಜಲಾಶಯದಲ್ಲಿ 139.8 ಅಡಿಯಿಂದ 141.3 ಅಡಿಯಷ್ಟು ನೀರು ಒಂದೇ ದಿನದಲ್ಲಿ ಏರಿಕೆಯಾಗಿದ್ದು, ಭದ್ರಾ ಡ್ಯಾಂ ನಿಂದ ಲಿಂಗನಮಕ್ಕಿ ಜಲಾಸಯಕ್ಕೆ 45.115 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

1819 ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಲಿಂಗನಮಕ್ಕಿ ಜಲಾಶಯದಲ್ಲಿ 1778.15 ಅಡಿಯಷ್ಟು ನೀರು ಸಂಗ್ರಹವಾಗಿದೆ. 24 ಗಂಟೆಯಲ್ಲಿ 2.45 ಅಡಿಯಷ್ಟು ನೀರು ಏರಿಕೆಯಾಗಿದ್ದು ಮಲೆನಾಡಿನ ಜಲಾಶಯಗಳು ಜೀವಕಳೆ ಪಡೆದುಕೊಂಡಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...