ಶಿವಮೊಗ್ಗ ಜಿಲ್ಲೆ ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಭಗ್ನ ಪ್ರೇಮಿಯೊಬ್ಬ ವಿವಾಹಿತೆಗೆ ಪ್ರೀತಿಸುವಂತೆ ಕಿರುಕುಳ ನೀಡಿದ್ದು, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಹೊಸನಗರ ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡ್ರೋಳ್ಳಿ ಯುವಕನೊಂದಿಗೆ ಏಪ್ರಿಲ್ 16 ರಂದು ಯುವತಿಯ ಮದುವೆ ನೆರವೇರಿತ್ತು. ಗಂಡನ ಮನೆಯಲ್ಲಿ ಯುವತಿ ಪಾತ್ರೆಯ ತೊಳೆಯುತ್ತಿದ್ದ ಸಂದರ್ಭದಲ್ಲಿ ಸಾಗರ ತಾಲೂಕು ತುಮರಿಯ ಮಹಾದೇವ ಎಂಬಾತ ಆಕೆಯನ್ನು ತಬ್ಬಿಕೊಂಡು ನನ್ನನ್ನು ಪ್ರೀತಿಸು ಎಂದು ಬಲಾತ್ಕಾರ ಮಾಡಲು ಯತ್ನಿಸಿದ್ದಾನೆ.
ಈ ಮೊದಲ ನನ್ನನ್ನು ಪ್ರೀತಿಸಿ ಈಗ ಬೇರೆಯವರನ್ನು ಮದುವೆಯಾಗಿದ್ದೀಯಾ ಎಂದು ನಿಂದಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.