ಶಿವಮೊಗ್ಗ: ಜೋಕಾಲಿಗೆ ಕಟ್ಟಿದ್ದ ಸೀರೆ ಸುತ್ತಿಕೊಂಡು ಬಾಲಕ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಯನಗರ ಬಡಾವಣೆಯಲ್ಲಿ ನಡೆದಿದೆ.
ಭದ್ರಾವತಿ ತಾಲೂಕು ಅರಹತೊಳಲು ಗ್ರಾಮದ 12 ವರ್ಷದ ಭರತ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಶಿವಮೊಗ್ಗದ ಆಸ್ಪತ್ರೆಗೆ ಬಂದಿದ್ದ ಭರತ್ ಚಿಕಿತ್ಸೆ ಪಡೆದ ನಂತರ ಜಯನಗರದಲ್ಲಿದ್ದ ಅತ್ತೆಯ ಮನೆಗೆ ತೆರಳಿದ್ದಾನೆ. ಈ ವೇಳೆ ಜೋಕಾಲಿ ಆಡುವಾಗ ಜೋಕಾಲಿಯ ಸೀರೆ ಸುತ್ತಿಕೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.