ಶಿವಮೊಗ್ಗ: ಹೊರವಲಯದ ಹುಣಸೋಡು ಬಳಿ ಡೈನಾಮೈಟ್ ಲಾರಿ ಸ್ಪೋಟಗೊಂಡು ಸುಮಾರು 8 ಮಂದಿ ಮೃತಪಟ್ಟಿದ್ದಾರೆ.
ಅಂದ ಹಾಗೇ, ಈ ಸ್ಥಳದಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಗೊತ್ತಾಗಿದೆ. 2016 ರಲ್ಲಿ ಪರವಾನಿಗೆ ಮುಗಿದಿದ್ದರೂ ಕೂಡ ಕಲ್ಲುಗಣಿ ಮಾಲೀಕ ಸುಧಾಕರ್ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಎನ್ನುವುದು ಗೊತ್ತಾಗಿದೆ. ಮೂರು ವರ್ಷದ ಅವಧಿಗೆ ಕ್ರಷರ್ ಗಾಗಿ ಲೈಸೆನ್ಸ್ ಪಡೆದುಕೊಂಡಿದ್ದು, ಲೈಸೆನ್ಸ್ ಅವಧಿ ಮುಗಿದರೂ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು.
ಅನುಮತಿ ಇಲ್ಲದಿದ್ದರೂ, ಸ್ಪೋಟಕಗಳನ್ನು ಬಳಸಲಾಗಿದೆ. ಭಾರೀ ಪ್ರಮಾಣದಲ್ಲಿ ಡೈನಮೈಟ್ ಸಂಗ್ರಹಿಸಲಾಗಿತ್ತು. ಮೂರು ವರ್ಷಕ್ಕೆ ಲೈಸೆನ್ಸ್ ಪಡೆದುಕೊಂಡಿದ್ದ ಮಾಲೀಕ ಸುಧಾಕರ್, ಅವಧಿ ಮುಗಿದರೂ ಕ್ರಷರ್ ನಡೆಸುತ್ತಿರುವುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಇನ್ನು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ಗಂಧದಮನೆ ನರಸಿಂಹ ಸೇರಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಜಮೀನು ಮಾಲೀಕ ಅವಿನಾಶ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.