ಶಿವಮೊಗ್ಗ: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಗಳು, ನದಿಗಳು, ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದು, ತುಂಬಿ ಹರಿಯುತ್ತಿವೆ. ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ ಭರಪೂರ ನೀರು ಹರಿದುಬಂದಿದೆ. ಬರದ ಛಾಯೆಯಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಈ ಬಾರಿ ಸಂತಸ ಮೂಡಿದೆ.
ಈ ಭಾಗದ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯದಲ್ಲಿ ಒಂದೇ ದಿನದಲ್ಲಿ ಒಂದು ಅಡಿ ನೀರು ಹರಿದು ಬಂದಿದ್ದು ನೆಮ್ಮದಿ ತಂದಂತಾಗಿದೆ. ಅಲ್ಲದೇ ಈ ಸಲ ಬೇಸಿಗೆಯಲ್ಲಿಯೂ ನೀರಿಗೆ ಸಮಸ್ಯೆಯಿರದು ಎಂಬ ಆಶಾಭಾವನೆ ಮೂಡಿಸಿದೆ.
ಸದ್ಯ ಭದ್ರಾ ಡ್ಯಾಂ ನಲ್ಲಿ 24 ಗಂಟೆಯಲ್ಲಿ 1.5 ಅಡಿಯಷ್ಟು ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದೆ. ಬರೋಬ್ಬರಿ 8,655 ಕ್ಯುಸೆಕ್ ನೀರು ಹರಿದು ಬಂದಿದೆ. ಒಂದೇದಿನದಲ್ಲಿ ಎರಡು ಪಟ್ಟು ನೀರು ಜಲಾಶಯಕ್ಕೆ ಹರಿದು ಬಂದಿದೆ. ಆದಾಗ್ಯೂ ಕಳೆದ ಸಾಲಿಗೆ ಹೋಲಿಸಿದರೆ ಜಲಾಶಯದನೀರಿನ ಮಟ್ಟ ಇನ್ನೂ 15 ಅಡಿ ಕಡಿಮೆ ಇದ್ದು, ಡ್ಯಾಂ ನಲ್ಲಿ ನೀರಿನ ಮಟ್ಟ 122.3ರಷ್ಟಿದೆ.