
ಶಿವಮೊಗ್ಗ: ಭಾನುವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅನ್ಯಕೋಮಿನ ಯುವಕರ ನಡುವೆ ಜಗಳವಾಗಿ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ.
ಗೋಪಾಳದ ವಿನಾಯಕ ಸರ್ಕಲ್ ನಲ್ಲಿ ಶೇಷಣ್ಣ ಎಂಬುವರ ಬೈಕ್ ಗೆ ಆಟೋ ಬಾಬು ಮತ್ತು ಇತರೆ ಮುಸ್ಲಿಂ ಯುವಕರು ಇದ್ದ ಆಟೋ ಡಿಕ್ಕಿಯಾಗಿದೆ. ಈ ವೇಳೆ ಅಲ್ಲೇ ಇದ್ದ ಬಜರಂಗದಳದ ಜಿತೇಂದ್ರ ಮತ್ತು ಸಂದೇಶ್ ಬೈಕ್ ನಲ್ಲಿ ಆಟೋ ಬೆನ್ನಟ್ಟಿದ್ದಾರೆ. ಶಾದಿ ಮಹಲ್ ಬಳಿ ಆಟೋ ತಡೆದು ವಿಚಾರಿಸಿದಾಗ ಸಮೀಪದಲ್ಲಿದ್ದ ಮುಸ್ಲಿಂ ಯುವಕರು ಕೈ, ಇಟ್ಟಿಗೆಯಿಂದ ಸಂದೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಸಂದೇಶ್ ಕಣ್ಣಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂದೇಶ್ ನನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ವಿಜಯಕುಮಾರ್ ಎಂಬವರನ್ನು ಕರೆಸಿಕೊಂಡ ತಾಸಿನ್ ನಿಂದಿಸಿ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.