ಶಿವಮೊಗ್ಗ: ಸೈಬರ್ ಟಿಪ್ ಲೈನ್ ನಿಂದ ಬಂದ ಮಾಹಿತಿ ಮೇರೆಗೆ ಫೇಸ್ ಬುಕ್ ಮೆಸೆಂಜರ್ ಮೂಲಕ ಮಕ್ಕಳ ಅಶ್ಲೀಲ ವಿಡಿಯೋ ಫಾರ್ವರ್ಡ್ ಮಾಡುತ್ತಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಕಲಂ 67(ಬಿ) ಐಟಿ ಕಾಯ್ದೆಯಂತೆ ಶಿವಮೊಗ್ಗದ ಸಿ.ಇ.ಎನ್. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿದಿಗೆ ದುಮ್ಮಳ್ಳಿಯ ರಘು(25) ಎಂಬಾತನನ್ನು ಬುಧವಾರ ಸಿ.ಇ.ಎನ್. ಪೋಲಿಸರು ಬಂಧಿಸಿದ್ದು. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಮಕ್ಕಳ ಅಶ್ಲೀಲ ವಿಡಿಯೋ ಅಥವಾ ಚಿತ್ರಗಳನ್ನು ಅಂತರ್ಜಾಲದ ಮೂಲಕ ಹುಡುಕುವುದು, ಶೇಖರಿಸುವುದು ಮತ್ತು ಫಾರ್ವರ್ಡ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67(B) ಪ್ರಕಾರ ಅಪರಾಧವಾಗಿರುತ್ತದೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.