ಶಿವಮೊಗ್ಗ: ಮಲೆನಾಡಿನ ಜನರಿಗೆ ಸಿಹಿಸುದ್ದಿ. ಶಿವಮೊಗ್ಗ ನಗರದ ಎಪಿಎಂಸಿ ಯಾರ್ಡ್ ನಲ್ಲಿ ಮೂರು ದಿನಗಳ ಕಾಲ ಮಾವುಮೇಳ ಆರಂಭವಾಗಲಿದೆ.
ಮೇ 31ರಿಂದ ಜೂನ್ 2ರವರೆಗೆ ಶಿವಮೊಗ್ಗದ ಎಪಿಎಂಸಿ ಯಾರ್ಡ್ ನ ಡಿ.ಮಲ್ಕಪ್ಪ ಆಂಡ್ ಸನ್ಸ್ ವತಿಯಿಂದ ಮಾವುಮೇಳ ಆರಂಭವಾಗಲಿದ್ದು, ಹಲವು ವಿಧದ ಮಾವುಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿದೆ.
ರತ್ನಗಿರಿ, ಆಲ್ಫೋನ್ಸಾ, ರಸಪುರಿ, ರಾಮನಗರ ಬಾದಾಮಿ, ತಮಿಳುನಡಿನ ಇಮಾಮ್ ಪಸಂದ್, ಆಂಧ್ರ ಮಲ್ಲಿಕಾ, ಬೇನಿಷಾ, ಬೆಂಗಳೂರು ಲಾಲ್ ಬಾಗ್, ಶಕರಗುಟ್ಟಿ ಅಥವಾ ಸಾಸಿವೆ ಮಾವಿನಹಣ್ಣು, ನಾಟಿ ಮಾವು, ಗುಜರಾತಿ ಕೇಸರ್, ಚೆನ್ನಪಟ್ಟಣ ದಿಲ್ ಪಸಂದ್, ಉತ್ತರ ಪ್ರದೇಶದ ದಶೇರಿ, ಕಸಿ ಸೇರಿದಂತೆ ನಾವು ಕಂಡು ಕೇಳರಿಯದ ಹೊಸ ಬಗೆಯ ಹಲವು ಮಾವಿನ ಹಣ್ಣುಗಳ ಪ್ರದರ್ಶ ಹಾಗೂ ಮಾರಾಟ ನಡೆಯಲಿದೆ.
ಮಾವಿನ ಹಣ್ಣಿನ ಜೊತೆಗೆ ಸೇಬು, ಡ್ರ್ಯಾಗನ್ ಫ್ರೂಟ್ ಸೇರಿದಂತೆ ತರಹೇವಾರಿ ಹಣ್ಣುಗಳು ಮೇಳದಲ್ಲಿ ಇರಲಿವೆ.