alex Certify ಮಲೆನಾಡಿನ ಜನತೆಗೆ ಸಿಹಿ ಸುದ್ದಿ: ವಿಮಾನ ಹಾರಾಟಕ್ಕೆ ಮತ್ತೊಂದು ವರ್ಷ ಪರವಾನಗಿ ನವೀಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲೆನಾಡಿನ ಜನತೆಗೆ ಸಿಹಿ ಸುದ್ದಿ: ವಿಮಾನ ಹಾರಾಟಕ್ಕೆ ಮತ್ತೊಂದು ವರ್ಷ ಪರವಾನಗಿ ನವೀಕರಣ

ಶಿವಮೊಗ್ಗ: ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದ ಪರವಾನಗಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಒಂದು ವರ್ಷಕ್ಕೆ ನವೀಕರಣ ಮಾಡಿದೆ.

ಸೋಗಾನೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಜ್ಞರ ತಂಡ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ ಎಂದು ವರದಿ ನೀಡಿತ್ತು. ಇದರ ಆದರದ ಮೇಲೆ ಆಗಸ್ಟ್ ನಲ್ಲಿ ಮುಕ್ತಾಯವಾಗಬೇಕಿದ್ದ ಪರವಾನಗಿಯನ್ನು ಒಂದು ತಿಂಗಳಿಗೆ ನವೀಕರಿಸಲಾಗಿತ್ತು. ನಂತರ ಮತ್ತೊಂದು ತಿಂಗಳು ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿತ್ತು. ಅಕ್ಟೋಬರ್ 23 ರಂದು ಮುಕ್ತಾಯವಾಗಬೇಕಿದ್ದ ಪರವಾನಗಿಯನ್ನು 2025ರ ಅಕ್ಟೋಬರ್ 23ರ ವರೆಗೆ ನವೀಕರಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿರುವ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುವಂತೆ ಕರ್ನಾಟಕ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚನೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...