
ಜೂನ್ 14ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಜೈ ಶಂಕರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಚಿತ್ರ ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮಾಡಿಸಿದೆ ಇಂದು ಈ ಸಿನಿಮಾದ ಪ್ರಮೋಷನಲ್ ಹಾಡನ್ನು ರಿಷಬ್ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಸಂಗೀತ ಕಟ್ಟಿ ಧ್ವನಿಯಾಗಿದ್ದು, ಜೈ ಶಂಕರ್ ಹಾಗೂ ಜಯಲಕ್ಷ್ಮಿ ಪಾಟೀಲ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದು, ಶರಣಮ್ಮ ಚಟ್ಟಿ ಸೇರಿದಂತೆ ಚೆನ್ನಮ್ಮ ಅಬ್ಬೇಗೆರೆ, ಶಿವು ಅಬ್ಬೇಗೆರೆ, ಶೃತಿ ಕೊಂಡೆನಹಳ್ಳಿ, ಶಿವಾನಂದ್ ಸದರ್, ತೆರೆ ಹಂಚಿಕೊಂಡಿದ್ದಾರೆ. ಜೈ ಶಂಕರ್ ಆರ್ಯರ್ ಮತ್ತು ಚಂದನ್ ಸಿಎಂ ಅವರ ಸಂಕಲನವಿದೆ. ಹಳ್ಳಿ ಸೊಗಡಿನ ಈ ಸಿನಿಮಾದ ಸಂಪೂರ್ಣ ಶೂಟಿಂಗ್ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಎಂಬ ಹಳ್ಳಿಯಲ್ಲಿ ನಡೆದಿದೆ.