ಹಾಸನ: ಲೋಕಸಭಾ ಚುನಾವಣೆ ವೇಳೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷದಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಮುಖಂಡ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಹಣ ಹಂಚಿಕೆ ಆರೋಪಕ್ಕೆ ಪುಷ್ಠಿ ನೀಡುವಂತಿದೆ. ಆಡಿಯೋದಲ್ಲಿ ಸಿಎಂ, ಡಿಸಿಎಂ ಸೂಚನೆಯಂತೆ ಹಣ ಹಂಚಬೇಕು ಎನ್ನಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 5 ಕೋಟಿ ಕೊಡ್ತಾರೆ. ಮಾಜಿ ಎಂಎಲ್ ಸಿ ಗೋಪಾಲಸ್ವಾಮಿ ಒಂದು ಕೋಟಿ, ನಾನು ಒಂದು ಕೋಟಿ ಕೊಡುತ್ತೇನೆ. ಒಟ್ಟು 7 ಕೋಟಿ ಹಂಚಿಕೆಯಾಗಬೇಕು ಎಂದು ಆಡಿಯೋದಲ್ಲಿ ಹೆಳಲಾಗಿದ್ದು, ಶಿವಲಿಂಗೇಗೌಡರು ತಮ್ಮ ಪಕ್ಷದ ಮುಖಂಡರ ಜೊತೆ ಮಾತನಾಡಿರುವ ಸಂಭಾಷಣೆಯಾಗಿದೆ ಎನ್ನಲಾಗಿದೆ.
ಪ್ರತಿ ವೋಟಿಗೆ 500 ರೂಪಾಯಿಯಂತೆ ಶೇ.68-70 ಜನರಿಗೆ ಹಣ ಕೊಡಿ. ಯಾರು ನಮಗೆ ವೋಟ್ ಹಾಕ್ತಾರೆ ಎಂಬುದು ಗೊತ್ತಿರುತ್ತೆ. ಅವರಿಗೆ ಕೊಡಿ. ಸಿಎಂ, ಡಿಸಿಎಂ, ಉಸ್ತುವಾರಿಯವರೇ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಪೆನ್ ಡ್ರೈವ್ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆಯೂ ಪ್ರಸ್ತಾಪವಾಗಿದೆ. ಇಂತಹ ಸಮಯ ಸದುಪಯೋಗಪಡಿಸಿಕೊಳ್ಳಬೇಕು. ವಿಡಿಯೋ ಲೀಕ್ ಆದ ಬಳಿಕ ಕುಮಾರಸ್ವಾಮಿಯವರೇ ಪ್ರಚಾರಕ್ಕೆ ಬರ್ಲಿಲ್ಲ. ದೇವೇಗೌಡರು ಅಂತಹ ವಯಸ್ಸಿನಲ್ಲಿ ಬಂದು ಪ್ರಚಾರ ಮಾಡಬೇಕಾ? ಬೇರೆ ಯಾರೂ ಇರಲಿಲ್ಲವೇ? ಎಂದು ಆಡಿಯೋದಲ್ಲಿ ಹೇಳಲಾಗಿದೆ.