
ಕೇಂದ್ರ ಸಚಿವ ನಾರಾಯಣ್ ರಾಣೆ ಭೇಟಿ ಕೊಟ್ಟ ಬಳಿಕ ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಸ್ಮಾರಕವನ್ನು ಪಕ್ಷದ ಕಾರ್ಯಕರ್ತರು ’ಶುದ್ಧ’ಗೊಳಿಸಿದ್ದಾರೆ.
ಬಿಜೆಪಿಯ ಜನ ಆಶೀರ್ವಾದ್ ಯಾತ್ರೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ರಾಣೆ ಬಾಳಾಸಾಹೇಬರ ಜನ್ಮದಿನದಂದು ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
ಮುಮ್ಮಲಮರುಗಿಸುತ್ತೆ ವಿಮಾನದಿಂದ ಬಿದ್ದು ಸಾವನ್ನಪ್ಪಿದ ನತದೃಷ್ಟರ ಕಥೆ
ಇದಾದ ಬೆನ್ನಿಗೆ ಬಾಳಾಸಾಹೇಬರ ಸ್ಮಾರಕವನ್ನು ಗೋಮೂತ್ರ ಹಾಗೂ ಹಾಲಿನಿಂದ ಶುದ್ಧಿ ಮಾಡುವ ಕೆಲಸ ಮಾಡಿದ್ದಾರೆ ಶಿವಸೇನಾ ಕಾರ್ಯಕರ್ತರು.
2005ರಲ್ಲಿ ಶಿವಸೇನೆ ಬಿಟ್ಟ ರಾಣೆ, 1999ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. 2019ರಲ್ಲಿ ಬಿಜೆಪಿ ಸೇರಿದ ರಾಣೆ ಇತ್ತೀಚೆಗೆ ಮಾಡಲಾದ ಸಂಪುಟ ಪುನಾರಚನೆ ಮೇಳೆ ಕೇಂದ್ರ ಮಂತ್ರಿಯಾಗಿದ್ದಾರೆ.