
ಬೆಳಿಗ್ಗೆ ಏಳು ಗಂಟೆಗೆ ಸಂಜಯ್ ರಾವತ್ ನಿವಾಸಕ್ಕೆ ಆಗಮಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದರು. ನಂತರ ಈ ಕುರಿತು ವಿವರಣೆ ಪಡೆದುಕೊಂಡಿದ್ದು ಈಗ ವಶಕ್ಕೆ ಪಡೆದಿದ್ದಾರೆ.
ಈ ಮೊದಲು ಜುಲೈ 27ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತಾದರೂ ಸಂಸತ್ ಅಧಿವೇಶನದ ಕಾರಣಕ್ಕೆ ಅವರು ಗೈರು ಹಾಜರಾಗಿದ್ದರು. ನಂತರ ಇಂದು ಬೆಳಿಗ್ಗೆ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ದಾಳಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದ ಸಂಜಯ್ ರಾವತ್, ಸುಳ್ಳು ಆರೋಪಗಳಿಗೆ ಅಂಜುವುದಿಲ್ಲ. ಯಾವುದೇ ಕಾರಣಕ್ಕೂ ಶಿವಸೇನೆಯನ್ನು ತೊರೆಯುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ಹಾಗೂ ಶಿವಸೇನೆ ಇವುಗಳೆಲ್ಲವನ್ನು ಎದುರಿಸುತ್ತದೆ ಎಂದು ಹೇಳಿದ್ದರು.