ಶಿವಮೊಗ್ಗ : ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 31/12/2023 ರ ಭಾನುವಾರದಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ “ಗೋಪಾಳ ಕೊನೆ ಬಸ್ಸ್ಟಾಪ್ ಹತ್ತಿರ, ವಿನೋಬನಗರ ಪೊಲೀಸ್ ಚೌಕಿ ಹತ್ತಿರ, ಶರಾವತಿನಗರ ಎ ಬ್ಲಾಕ್ ಆದಿಚುಂಚನಗಿರಿ ಶಾಲೆ ನರ್ಸ್ ಕ್ವಾಟ್ರಸ್ ಎದುರು, ಮಂಡ್ಲಿ ಸರ್ಕಲ್ ಹತ್ತಿರ” ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್ಗಳನ್ನು ತೆರೆಯಲಾಗಿದೆ.
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.