alex Certify ಶಿವಮೊಗ್ಗ : ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆ ವಾಹನಗಳ ಮಾರ್ಗ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ : ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆ ವಾಹನಗಳ ಮಾರ್ಗ ಬದಲಾವಣೆ

ಶಿವಮೊಗ್ಗ : ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜೂನ್ 04 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ನಡೆಯಲಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ವಾಹನಗಳ ಸಂಚಾರ ನಿಷೇಧ, ವಾಹನ ನಿಲುಗಡೆ ಹಾಗೂ ವಾಹನಗಳ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಆದೇಶಿಸಿದ್ದಾರೆ.

ಸಹ್ಯಾದ್ರಿ ಕಾಲೇಜಿನ ಸುತ್ತಮುತ್ತ 100 ಮೀ. ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇದಿಸಲಾಗಿದೆ. ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್‍ಗಳು ಹಾಗೂ ಕಾರು ದ್ವಿಚಕ್ರ, ತ್ರಿಚಕ್ರ ವಾಹನಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸುವುದು. ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬಂದು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್‍ಗಳು ಬಿ.ಹೆಚ್.ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಹೋಗುವುದು. ಹೊನ್ನಾಳಿ ದಾವಣಗೆರೆಯಿಂದ ಬರುವ ಎಲ್ಲಾ ಭಾರಿ ವಾಹನ, ಎಲ್ಲಾ ಬಸ್‍ಗಳನ್ನು 100 ಅಡಿರಸ್ತೆ, ವಿನೋಬನಗರ ಮಾರ್ಗವಾಗಿ ಹೋಗುವುದು. ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ಬಸ್‍ಗಳು ಎ. ಎ. ಸರ್ಕಲ್, ಗೋಪಿ ಸರ್ಕಲ್, ಮಹಾವೀರ ಸರ್ಕಲ್, ಕೆಇಬಿ ಸರ್ಕಲ್ ಮುಖಾಂತರವಾಗಿ ಹೋಗುವುದು. ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆ ಮುಖಾಂತರ ಎಂ.ಆರ್.ಎಸ್. ಸರ್ಕಲ್ ಕಡೆಗೆ ಹೋಗುವುದು. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಅಂಬ್ಯುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿದೆ.

ಏಜೆಂಟರು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳ ವಾಹನಗಳ ನಿಲುಗಡೆ ಸಹ್ಯಾದ್ರಿ ಸೈನ್ಸ್ ಕಾಲೇಜು ಎದುರು ಮತ್ತು ವಜ್ರ ಮಹೋತ್ಸವ ಕಟ್ಟಡದ ಎದುರು ಮತ್ತು ಬಿ.ಹೆಚ್.ರಸ್ತೆಗೆ ಹೊಂದಿಕೊಂಡಂತಿರುವ ಮ್ಯಾಚ್ ಫ್ಯಾಕ್ಟರಿಗೆ ಸೇರಿದ ಮೈದಾನದಲ್ಲಿ ವಾಹನ ಪಾರ್ಕಿಂಗ್‍ಗೆ ಅನುಮತಿಸಿದೆ. ಎಂ.ಆರ್.ಎಸ್. ಸರ್ಕಲ್‍ನ ಹತ್ತಿರವಿರುವ ಕೆ.ಇ.ಬಿ ಸಮುದಾಯ ಭವನದ ಹಿಂಭಾಗ ವಾಹನಗಳ ಪಾರ್ಕಿಂಗ್‍ಗೆ ಅನುಮತಿ ನೀಡಿದೆ. ಸಾರ್ವಜನಿಕರ ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆ ಎಂಆರ್.ಎಸ್. ನಿಂದ ಎನ್.ಆರ್.ಪುರ ರಸ್ತೆಯ ಎಡಭಾಗದಲ್ಲಿ ಪಾರ್ಕಿಂಗ್ ಮಾಡುವುದು. ಬೈಪಾಸ್ ರಸ್ತೆಗೆ ಹೊಂದಿಕೊಂಡಂತಿರುವ ಸಹ್ಯಾದ್ರಿ ಕಾಲೇಜಿನ ಸ್ವೇಡಿಯಂ ಹತ್ತಿರ ಸಾರ್ವಜನಿಕರ ಎಲ್ಲಾ ವಾಹನಗಳ ಪಾರ್ಕಿಂಗ್‍ಗೆ ಅನುಮತಿ ನೀಡಿದೆ. ಎಂ.ಆರ್.ಎಸ್. ಸರ್ಕಲ್‍ನಿಂದ ಬಿ.ಹೆಚ್.ರಸ್ತೆ, ವಿದ್ಯಾನಗರ, ಮತ್ತೂರು ಕ್ರಾಸ್‍ವರೆಗೆ ಸಾರ್ವಜನಿಕರ ವಾಹನಗಳು ಒಡಾಡದಂತೆ ನಿಷೇದಿಸಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...