
ಶಿವಮೊಗ್ಗ : ಇಂದು ಅದ್ಧೂರಿಯಾಗಿ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ನಡುವೆ ಶಿವಮೊಗ್ಗ ದಸರಾ ಉತ್ಸವಕ್ಕೆ ಆಗಮಿಸಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
ಹೌದು, ಶಿವಮೊಗ್ಗ ದಸರಾ ಉತ್ಸವದಲ್ಲಿ ಅಂಬಾರಿ ಹೊರಲು ಸಕ್ರೆಬೈಲ್ ಆನೆ ಬಿಡಾರದಿಂದ ಸಾಗರ್ ಜೊತೆಯಲ್ಲಿ ಹೇಮಾವತಿ ಮತ್ತು ನೇತ್ರಾವತಿ ಆನೆಗಳು ಆಗಮಿಸಿದ್ದವು. ನಿನ್ನೆ ಸಿಟಿ ರೌಂಡ್ಸ್ ಹಾಕಿದ್ದ ಆನೆಗಳ ಪೈಕಿ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
ದಸರಾಗೆಂದು ಕರೆತಂದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಆನೆ ಗರ್ಭಿಣಿಯಾಗಿದೆ ಎಂದು ತಿಳಿದಿದ್ದರೂ ಕೂಡ ಸಕ್ರೆಬೈಲ್ ಬಿಡಾರದಿಂದ ಗರ್ಭಿಣಿ ಆನೆಯನ್ನ ಕರೆತರಲಾಗಿತ್ತು. ತುಂಬು ಗರ್ಭಿಣಿಯಾದಂತಹ ಆನೆಗಳನ್ನು ದಸರಾ ಕಾರ್ಯಕ್ರಮಕ್ಕೆ ಕರೆತಂದಿರುವ ಬಗ್ಗೆ ಆಕ್ಷೇಪಗಳು ಎದ್ದಿವೆ.