ರಸಗೊಬ್ಬರ ಮಾರಾಟಗಾರರು ರೈತರಿಗೆ ಎಂಆರ್‌ಪಿ ದರದಲ್ಲಿಯೇ ರಸಗೊಬ್ಬರ (ಯೂರಿಯಾ) ಮಾರಾಟ ಮಾಡಬೇಕೆಂದು ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಒಂದು ವೇಳೆ ಇದನ್ನು ಮೀರಿ ಅಧಿಕ ದರ ವಿಧಿಸಿದರೆ ಅಂತಹ ಕೃಷಿ ಪರಿಕರ ಮಾರಾಟ ಮಳಿಗೆಗಳ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಕೃತಕ ಅಭಾವ ಸೃಷ್ಟಿಸುವುದು ಕಂಡು ಬಂದಲ್ಲಿ ಸಹ ಇದೆ ಕಠಿಣ ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದ್ದು, ಮಾರಾಟಗಾರರು ರಸಗೊಬ್ಬರ ದರಗಳನ್ನು ಮಾರ್ಗಸೂಚಿ ಅನ್ವಯ ಪ್ರದರ್ಶನ ಮಾಡಿ ನಿಗದಿತ ನಮೂನೆಯಲ್ಲಿ ಬಿಲ್ ನೀಡಬೇಕು ಎಂದು ತಿಳಿಸಿದ್ದಾರೆ.