
ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸರು ಆಗಾಗ ಮಾನವೀಯತೆ ತೋರಿ ಹೃದಯ ಗೆದ್ದುಬಿಡುತ್ತಾರೆ. ಶಿಮ್ಲಾದಲ್ಲಿ ಹಿಮವರ್ಷದಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿ ಮಹಿಳೆಯೊಬ್ಬರ ನೆರವಿಗೆ ಬಂದ ಹಿಮಾಚಲ ಪ್ರದೇಶ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ತೋರಿದ್ದಾರೆ. ಹಿಮವರ್ಷದ ಕಾರಣದಿಂದ ಇಲ್ಲಿನ ರಸ್ತೆಗಳೆಲ್ಲಾ ಬ್ಲಾಕ್ ಆಗಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.
1 -8 ನೇ ತರಗತಿ ವಿದ್ಯಾರ್ಥಿಗಳಿಗೆ 24 ಸಾವಿರ ರೂ., 9 -12 ನೇ ತರಗತಿಗೆ 30 ಸಾವಿರ ರೂ. ಸೇರಿ 60 ಸಾವಿರ ರೂ.ವರೆಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
“ಇಂಥ ಪರಿಸ್ಥಿತಿಯಲ್ಲಿ ಶಿಮ್ಲಾ ಪೊಲೀಸರು ಹೆರಿಗೆಗ ಹೊರಟಿದ್ದ ಗರ್ಭಿಣಿಯೊಬ್ಬರನ್ನು ರಕ್ಷಿಸಿ (ಶಿಮ್ಲಾ ಜಿಲ್ಲೆಯ ತೆಯೋಗ್ ತೆಹ್ಸೀಲ್‌ನ ಅನು ಗ್ರಾಮದ ಅಶ್ವಾನಿ ಎಂಬವರ ಮಡದಿ ಶಿವಾಂಗಿ) ಆಕೆಯನ್ನು ಶಿಮ್ಲಾದ ನೆಹ್ರೂ ಆಸ್ಪತ್ರೆಗೆ ಡ್ರಾಪ್ ಮಾಡಿದ್ದಾರೆ,” ಎಂದು ಶಿಮ್ಲಾ ಪೊಲೀಸ್ ಟ್ವೀಟ್ ಮಾಡಿದೆ.
ಶನಿವಾರ ರಾತ್ರಿಯಿಂದ ಆಚೆಗೆ ಶಿಮ್ಲಾ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಹಿಮವರ್ಷ ಸಂಭವಿಸುತ್ತಿದೆ. ಶಿಮ್ಲಾ, ಖುಫ್ರಿ ಮತ್ತು ನಾರ್ಖಂಡಾ ಸುತ್ತಲಿನ ಪ್ರದೇಶಗಳು ಹಿಮದಿಂದ ಆವೃತವಾಗಿದ್ದು, ವಾಹನಗಳ ಸಂಚಾರದಲ್ಲಿ ಭಾರೀ ವ್ಯತ್ಯವಾಗುತ್ತಿದೆ.