ಬಾಲಿವುಡ್ನ ಹಲವು ಬೆಡಗಿಯರು ಶ್ರೀಮಂತ ಬಿಜಿನೆಸ್ಮೆನ್ಗಳನ್ನು ವರಿಸಿದ್ದಾರೆ. ಥಳಕು ಬಳುಕಿನ ಜಗತ್ತಿನಲ್ಲಿ ಮಿಂಚಿರುವ, ಮಿಂಚುತ್ತಿರುವ ತಾರೆಯರ ಪೈಕಿ ಹಲವು ಉದ್ಯಮಿಗಳಿಗೆ ಮದುವೆಯಾಗಿದ್ದಾರೆ. ಇಂಥ ಕೆಲವು ನಟಿಯರು ಪರಿಚಯ ಇಲ್ಲಿದೆ.
ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ, ಲಂಡನ್ ಮೂಲದ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು, ಶಿಲ್ಪಾ ಅವರ ಸುಗಂಧ ಬ್ರಾಂಡ್ ಎಸ್2 ಪ್ರಚಾರ ಮಾಡುವ ವ್ಯಾಪಾರ ಸಭೆಯಲ್ಲಿ ಇವರಿಬ್ಬರು ಮೊದಲು ಭೇಟಿಯಾಗಿದ್ದರು. ನಂತರ ಸ್ನೇಹಿತರಾಗಿ ದಾಂಪತ್ಯಕ್ಕೆ ಕಾಲಿಟ್ಟರು. ರಾಜ್ ಕುಂದ್ರಾ, ಶಿಲ್ಪಾಳ ಸರಳತೆಗೆ ಸೆಳೆಯಲ್ಪಟ್ಟರು ಎನ್ನಲಾಗಿದೆ.
ಫಿಲ್ಮ್ಫೇರ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ರಾಜ್, “ಇದು ಮೊದಲ ನೋಟದಲ್ಲೇ ಆದ ಪ್ರೀತಿ. ನಾನು ಅವಳನ್ನು ನೋಡಿದ ಕ್ಷಣದಿಂದ, ನಾನು ಅವಳನ್ನು ನನ್ನ ಜೀವನ ಸಂಗಾತಿಯಾಗಲು ಇಷ್ಟಪಟ್ಟೆ ಎಂದು ತಿಳಿಸಿದ್ದರು.
ಇಶಾ ಡಿಯೋಲ್
ಇಶಾ ಡಿಯೋಲ್ ಪತಿ ಭರತ್ ವಜ್ರದ ವ್ಯಾಪಾರಿ. ಹಿಂದೊಮ್ಮೆ ಇಶಾಳನ್ನು ಇಷ್ಟಪಟ್ಟಿದ್ದ ಭರತ್ ಒಮ್ಮೆ ಆಕೆಯ ಕೈ ಹಿಡಿಯಲು ಪ್ರಯತ್ನಿಸಿದಾಗ ಇಶಾ ತಿರಸ್ಕರಿಸಿದ್ದರು. ನಂತರ 10 ವರ್ಷ ಇಬ್ಬರೂ ಒಂದೇ ಒಂದು ಮಾತನ್ನು ಆಡಿರಲಿಲ್ಲ. ಈ ನಡುವೆ ಈಶಾ ತನ್ನ ಹೆತ್ತವರಾದ ಹೇಮಾ ಮಾಲಿನಿ ಮತ್ತು ಧರ್ಮೇಂದ್ರರ ಮಾರ್ಗ ಅನುಸರಿಸಿ ನಟನಾ ವೃತ್ತಿಯಲ್ಲಿ ತೊಡಗಿಸಿಕೊಂಡರೆ, ಭರತ್ ತಂದೆಯ ಹಾದಿಯನ್ನು ಅನುಸರಿಸಿ ಶ್ರೀಮಂತ ಉದ್ಯಮಿಯಾದರು. ನಂತರ ಇಬ್ಬರ ನಡುವೆ ಮತ್ತೆ ಪ್ರೀತಿ ಚಿಗುರಿ ಇಬ್ಬರೂ ಮದುವೆಯಾದರು.
ಸೋನಂ ಕಪೂರ್
ಬಾಲಿವುಡ್ ಫ್ಯಾಷನಿಸ್ಟ್ ಸೋನಮ್ ಕಪೂರ್ ಅವರು ತಮ್ಮ ದೀರ್ಘಾವಧಿಯ ಗೆಳೆಯ ಮಿಲಿಯನೇರ್ ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 8, 2018 ರಂದು ವಿವಾಹವಾದರು. ಆನಂದ್ ಶಾಹಿ ಎಕ್ಸ್ಪೋರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಮತ್ತು ಎರಡು ಬ್ರ್ಯಾಂಡ್ಗಳ ಮಾಲೀಕರಾಗಿದ್ದಾರೆ.
ಆನಂದ್ ಅವರು 3000 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಸೋನಂ ಮತ್ತು ಆನಂದ್ ಇತ್ತೀಚೆಗೆ ಲಂಡನ್ನ ನಾಟಿಂಗ್ ಹಿಲ್ನಲ್ಲಿ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ, ಅಲ್ಲಿ ಅವರು ಶೀಘ್ರದಲ್ಲೇ ಸ್ಥಳಾಂತರಗೊಳ್ಳಲು ಯೋಜಿಸಿದ್ದಾರೆ.
ಜೂಹಿ ಚಾವ್ಲಾ
ಮಾಜಿ ಮಿಸ್ ಇಂಡಿಯಾ ಮತ್ತು ಬಾಲಿವುಡ್ ತಾರೆ ಜೂಹಿ ಚಾವ್ಲಾ ಅವರು 1995 ರಲ್ಲಿ ಇಂಗ್ಲೆಂಡ್ ಮೂಲದ ಕೈಗಾರಿಕೋದ್ಯಮಿ ಜೇ ಮೆಹ್ತಾ ಅವರನ್ನು ವಿವಾಹವಾದರು. ಈ ದಂಪತಿ ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಖಾನ್ ಅವರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತಾ ನೈಟ್ ರೈಡರ್ಸ್ ಸಹ-ಮಾಲೀಕರಾಗಿದ್ದಾರೆ.
ಜಯ್ ಮತ್ತು ಜೂಹಿಗೆ ಇಬ್ಬರು ಮಕ್ಕಳಿದ್ದಾರೆ ಜಾಹ್ನವಿ ಮೆಹ್ತಾ ಮತ್ತು ಅರ್ಜುನ್ ಮೆಹ್ತಾ.
ಸೆಲಿನಾ ಜೇಟ್ಲಿ
ದುಬೈ ಮೂಲದ ಹೊಟೇಲ್ ಉದ್ಯಮಿ ಪೀಟರ್ ಹಾಗ್ ಅವರನ್ನು ಸೆಲಿನಾ ಜೇಟ್ಲಿ ರಹಸ್ಯವಾಗಿ ವಿವಾಹವಾದರು. ನಟಿ ಪರಸ್ಪರ ಸ್ನೇಹಿತನ ಮೂಲಕ ದುಬೈನಲ್ಲಿ ಮೊದಲ ಬಾರಿಗೆ ಹೋಟೆಲ್ ಮಾಲೀಕರನ್ನು ಭೇಟಿಯಾದರು ಮತ್ತು ತಕ್ಷಣವೇ ಪ್ರೇಮ ಬಂಧನಕ್ಕೆ ಒಳಗಾದರು.