ಹೌದು ! ಮೊನ್ನೆಯಷ್ಟೇ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಬೊಹೆಮಿಯನ್ ಶೈಲಿಯ ಲೆಹೆಂಗಾ ಧರಿಸಿ ವೇದಿಕೆ ಮೇಲೆ ರ್ಯಾಂಪ್ ವಾಕ್ ಮಾಡಿದ್ದರು. ಐವರಿ ಕಲರ್ ನ ಬೊಹೆಮಿಯನ್ ವಿನ್ಯಾಸವನ್ನು ಹೊಂದಿದ್ದ ಲೆಹೆಂಗಾ ಈಗ ಫ್ಯಾಷನ್ ಪ್ರಿಯರ ವೈರಲ್ ಔಟ್ಫಿಟ್ ಆಗ್ತಿದೆ.
ಮೊದಲಿನಿಂದಲೂ ಬೊಹೆಮಿಯನ್ ಸ್ಟೈಲ್ ಗೆ ಫ್ಯಾಷನ್ ಪ್ರಿಯರು ಮನ ಸೋತಿದ್ದರೂ ಈಗ ಮತ್ತೊಮ್ಮೆ ಬೊಹೆಮಿಯನ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ಆನ್ಲೈನ್ ಮಾರುಕಟ್ಟೆಯಲ್ಲಿ ಈ ವಿನ್ಯಾಸದ ಉಡುಗೆಗಾಗಿ ಭಾರೀ ಸರ್ಚಿಂಗ್ ಶುರುವಾಗಿದೆ.
ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಪ್ರಿಯಕರನ ವಿರುದ್ಧ ದೂರು ನೀಡಿದ ಮಹಿಳೆಗೆ ಬಿಗ್ ಶಾಕ್
ಏನಿದು ಬೊಹೆಮಿಯನ್ ಸ್ಟೈಲ್ !?
ಹಿಪ್ಪಿ ಫ್ಯಾಷನ್ ಅಂತಲೇ ಬೊಹೆಮಿಯನ್ ಡಿಸೈನ್ ಫೇಮಸ್. ಗೋವಾ ಮತ್ತು ಹಂಪಿಗಳಲ್ಲಿ ವಿದೇಶದಿಂದ ಬರುತ್ತಿದ್ದ ಪ್ರವಾಸಿಗರು ಇದನ್ನು ಹೆಚ್ಚು ಫೇಮಸ್ ಗೊಳಿಸಿದರು. ರೆಟ್ರೊ ಮಾದರಿ, ನ್ಯೂಟ್ರಾಲ್, 70 ರ ದಶಕದ ಶೈಲಿ ಇದರಲ್ಲಿರುತ್ತದೆ.
ಬೊಹೆಮಿಯನ್ ಕಲರ್ಸ್
ನ್ಯೂಟ್ರಲ್ ಕಲರ್ಸ್, ಸಮುದ್ರ ನೀಲಿ ಬಣ್ಣ, ಬಿಳಿ, ಹಸಿರು, ಕೆಂಪು, ಬೂದು, ಕಂದು ಬಣ್ಣ ಬೊಹೆಮಿಯನ್ ಸ್ಟೈಲ್ನಲ್ಲಿ ಹೆಚ್ಚು ಕಂಡು ಬರುತ್ತದೆ. ಕಲಾವಿದರು, ಸಿಕ್ಕಾಪಟ್ಟೆ ಬೋಲ್ಡ್ ಇರುವವರು, ಜೀವನ ಇರುವುದೇ ಎಂಜಾಯ್ ಮಾಡೋದಕ್ಕೆ ಎನ್ನುವ ಮನೋಭಾವವನ್ನು ಈ ವಸ್ತ್ರಗಳು ಪ್ರತಿನಿಧಿಸುತ್ತವೆ.
ಬೊಹೆಮಿಯನ್ ಡ್ರೆಸ್ ಗಳಿವು !
ಇನ್ನು ಬೊಹೆಮಿಯನ್ ಸ್ಕರ್ಟ್, ಲೆಹೆಂಗಾ, ಮಿಡಿ, ಕುರ್ತಾ, ಸ್ಯಾರಿಗಳು ಕೂಡ ಫ್ಯಾಷನ್ ಲೋಕದಲ್ಲಿ ಸಿಕ್ಕಾಪಟ್ಟೆ ಫೇಮಸ್. ಅದರಲ್ಲೂ ಬೊಹೊ ಕಿವಿಯೋಲೆಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್. ಹಾಗೆ ಕಡಿಮೆ ಬೆಲೆಗೆ ಈ ಬೊಹೆಮಿಯನ್ ಉಡುಗೆಗಳು ಆನ್ಲೈನ್ನಲ್ಲೂ ಲಭ್ಯವಿದೆ. ನೀವೇನಾದ್ರೂ ಫ್ಯಾಷನ್ ಪ್ರಿಯರಾಗಿದ್ದರೆ ಬೊಹೆಮಿಯನ್ ಸ್ಟೈಲ್ ನಿಮ್ಮ ಚಿತ್ತ ಕದಿಯೋದ್ರಲ್ಲಿ ಆಶ್ಚರ್ಯವಿಲ್ಲ.