ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಜಾರಿ ನಿರ್ದೇಶನಾಲಯ (ಇಡಿ) ಸಂಕಷ್ಟ ಎದುರಾಗಿದೆ. ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ಹೆಸರಲ್ಲಿದ್ದ ಎಲ್ಲಾ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾಗೆ ಸೇರಿದ ಸುಮಾರು 98 ಕೋಟಿ ಮೌಲ್ಯದ ಆಸ್ತಿಗಳನ್ನು ಇಡಿ ಅಧಿಕಾರಿಗಳು ತಾತ್ಕಾಲಿಕ ಜಪ್ತಿ ಮಾಡಿದ್ದು, ಮುಂಬೈನ ಜುಹುವಿನಲ್ಲಿರುವ ಫ್ಲ್ಯಾಟ್, ಪುಣೆಯಲ್ಲಿರುವ ಬಂಗಲೆ, ರಾಜ್ ಕುಂದ್ರಾ ಹೆಸರಲ್ಲಿರುವ ಶೇರುಗಳನ್ನು ಜಪ್ತಿ ಮಾಡಿದ್ದಾರೆ.
ರಾಜ್ ಕುಂದ್ರಾ ಹಾಗೂ ಅವರ ಸಂಗಡಿಗರು 2017ರಲ್ಲಿ ಬಿಟ್ ಕಾಯಿನ್ ಮೂಲಕ 6600 ಕೋಟಿ ಹಣ ಸಂಪಾದಿಸಿದ್ದರು. ಅಲ್ಲದೇ ತಿಂಗಳಿಗೆ ಶೇ.10ರಷ್ಟು ಹಣ ಪಾವತಿಸುವುದಾಗಿ ಜನರಿಗೆ ಆಮಿಷವೊಡ್ಡಿದ್ದರು ಎಂಬ ಆರೋಪ ಕೇಳಿಬಂದಿದೆ. ಇಡಿ ಆರೋಪದ ಪ್ರಕಾರ ರಾಜ್ ಕುಂದ್ರಾ ಪ್ರಸ್ತುತ ಬಿಟ್ ಕಾಯಿನ್ ಮೂಲಕ 150 ಕೋಟಿ ಲಾಭ ಗಳಿಸುತ್ತಿದ್ದಾರೆ. ಬಿಟ್ ಕಾಯಿನ್ ಹಗರಣದಲ್ಲಿ ರಾಜ್ ಕುಂದ್ರಾ ಹಾಗೂ ಪತ್ನಿ ಶಿಲ್ಪಾ ಶೆಟ್ಟಿ ಹೆಸರುಗಳಿದ್ದು, ಇದು ಸಾವಿರಾರು ಕೋಟಿ ರೂಪಾಯಿ ಹಗರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ 1018ರಲ್ಲಿಯೇ ಇಬ್ಬರಿಗೂ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ಈಗ ಹಗರಣದ ಪ್ರಮುಖ ಆರೋಪಿ ಅಮಿತ್ ಭಾರದ್ವಾಜ್ ನನ್ನು ಬಂಧಿಸಲಾಗಿದೆ. ಈ ಹಣ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ್ದಾಗೆ. ಈ ಹಿನ್ನೆಲೆಯಲ್ಲಿ ಇಡಿ ರಾಜ್ ಕುಂದ್ರಾ ಹಾಗೂ ಪತ್ನಿ ಶಿಲ್ಪಾ ಶೆಟ್ಟಿ ಆಸ್ತಿ ತಾತ್ಕಾಲಿಕ ಜಪ್ತಿ ಮಾಡಿದೆ ಎಂದು ತಿಳಿದುಬಂದಿದೆ.