ಶಿಬಾ ಇನು ಕಾಯಿನ್ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಕಳೆದ 24 ಗಂಟೆಗಳಲ್ಲಿ ಶಿಬಾ ಇನು ಶೇಕಡಾ 45ರಷ್ಟು ಏರಿಕೆ ಕಂಡಿದೆ. ಮಂಗಳವಾರದ ವೇಳೆಗೆ ಟೋಕನ್ $0.00001264ರಲ್ಲಿ ವಹಿವಾಟು ನಡೆಸುತ್ತದೆ. ಇತ್ತ ಮಾರುಕಟ್ಟೆ ಕ್ಯಾಪ್ $4,987,163,972 ರಷ್ಟಾಗಿದೆ.
ಅಧಿಕೃತ ವೆಬ್ಸೈಟ್ನಲ್ಲಿರುವ ಮಾಹಿತಿಯ ಪ್ರಕಾರ SHIB ಸೃಷ್ಟಿಕರ್ತರು ಇದನ್ನು ಡಾಡ್ಜ್ ಕ್ವೀನ್ ನಿಂದ ಸ್ಫೂರ್ತಿಯೊಂದಿಗೆ ರಚಿಸಿದ್ದಾರೆ. ಶಿಬಾ ಇನು ಸೃಷ್ಟಿಕರ್ತರು SHIB ಅನ್ನು NFT ತಲುಪುವ ಗುರಿಯನ್ನು ಹೊಂದಿದ್ದರು. SHIB ಟೋಕನ್ ERC-20 ಆಗಿದೆ. ಶಿಬಾ ಇನುವನ್ನು ಡಾಗ್ ಕಾಯಿನ್ ಕಿಲ್ಲರ್ ಎಂದು ಕರೆಯಲಾಗುತ್ತದೆ.
ಕ್ರಿಪ್ಟೋ ಮಾರುಕಟ್ಟೆಯು ಬಹಳ ಅಸ್ಥಿರವಾಗಿದೆ. ಸಾಮಾನ್ಯವಾಗಿ ಕ್ರಿಪ್ಟೋಕರೆನ್ಸಿಗಳು ಉತ್ತುಂಗದಲ್ಲಿ ಇರಲು ಯಾವುದೇ ಕಾರಣಗಳು ಇರುವುದಿಲ್ಲ. ಈ ಭಾರಿ ಟೆಸ್ಲಾ ಸಿಇಓ ಎಲಾನ್ ಮಸ್ಕ್ರ ಟ್ವೀಟ್ನ ಬಳಿಕ ಇದಕ್ಕೆ ಇಷ್ಟೊಂದು ಬೆಲೆ ಬಂದಿದೆ.
ಮೊದಲು ಮಸ್ಕ್ ತಮ್ಮ ಸಾಕು ಶ್ವಾನ ಫ್ಲೋಕಿಯ ಫೋಟೋವನ್ನು ಹಂಚಿಕೊಂಡ ಬಳಿಕ ಶಿಬಾ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಸೋಮವಾರ ಮಸ್ಕ್ Floki Frunkpuppy ಎಂಬ ಶೀರ್ಷಿಕೆಯ ಜೊತೆಗೆ ಇನ್ನೊಂದು ಫೋಟೋವನ್ನು ಟ್ವೀಟ್ ಮಾಡಿದ್ದರು. ಇದಾದ ಬಳಿಕ ಟೋಕನ್ನ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.