ಜಗತ್ತಿನಾದ್ಯಾಂತ ಒಲಿಂಪಿಕ್ಸ್ ಜ್ವರ ಶುರುವಾಗಿ ವಾರ ಕಳೆಯಿತು. ಕ್ರಿಕೆಟ್ ಅಭಿಮಾನಿಗಳು ತಮ್ಮ ದೇಶದ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದೀಗ ಪುಟ್ಟ ಬಾಲೆಯೊಬ್ಬಳು ಸ್ಪರ್ಧಿಗಳಿಗೆ ಚಿಯರ್ ಅಪ್ ಹೇಳಿರುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
ಹೌದು, ಅಮೆರಿಕಾದಲ್ಲಿ ವ್ಯಕ್ತಿಯೊಬ್ಬರು ಟಿವಿಯಲ್ಲಿ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ ವೀಕ್ಷಿಸುತ್ತಿದ್ದರು. ಈ ವೇಳೆ ತನ್ನ ತಂದೆಯ ಬಳಿ ಬಂದು ಕುಳಿತ ಪುಟ್ಟ ಬಾಲಕಿ, ‘ಮಹಿಳೆಯರು ತುಂಬಾ ಬಲಶಾಲಿಗಳು’ ಅಂತಾ ಹೇಳಿದ್ದಾಳೆ. ಭಾಗವಹಿಸುತ್ತಿರುವವರ ಬಗ್ಗೆ ವ್ಯಾಖ್ಯಾನ ನೀಡಿದ ಬಳಿಕ ಬಾಲೆಯು ಸಂಭ್ರಮಾಚರಣೆ ಮಾಡಿದ್ದಾಳೆ. ‘ಅವಳು ಗೆದ್ದಳು, ಅವಳು ಗೆದ್ದಳು’ ಅಂತಾ ಕುಣಿದು ಕುಪ್ಪಳಿಸಿದ್ದಾಳೆ.
ಆನ್ಲೈನ್‌ನಲ್ಲಿ ದೇಶವಾಸಿಗಳ ಯೋಗಕ್ಷೇಮ ವಿಚಾರಿಸಿದ ಫೇಮಸ್ ಬಿಸ್ಕಿಟ್ ಬ್ರಾಂಡ್
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಬಾಲೆಯ ಕ್ರೀಡಾಭಿಮಾನಕ್ಕೆ ಮನಸೋತಿದ್ದಾರೆ.