
ರಾಜ್ ಕುಂದ್ರಾ ಪ್ರಕರಣದಲ್ಲಿ ಕಳಂಕಿತರಾಗಿರುವ ನಟಿ ಶೆರ್ಲಿನ್ ಚೋಪ್ರಾ ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನೀಲಿ ಚಿತ್ರಗಳ ನಿರ್ಮಾಣದ ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾರ ಬ್ಯುಸಿನೆಸ್ ಡೀಲಿಂಗ್‌ಗಳ ಮೇಲೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಶೆರ್ಲಿನ್‌ಗೆ ಸಮನ್ಸ್ ಕೊಟ್ಟಿದ್ದರು. ವಿಚಾರಣೆಗೆ ಎದುರಾಗುವ ಮುನ್ನ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸುವುದಾಗಿ ಶೆರ್ಲಿನ್ ಹೇಳಿಕೊಂಡಿದ್ದಾರೆ.
ವಿರೋಧಕ್ಕೆ ಮಣಿದು ವಿವಾದಾತ್ಮಕ ಹೇಳಿಕೆ ಹಿಂಪಡೆದ ಸಿಧು
ಜುಲೈ 19ರಂದು ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾದ ಕುಂದ್ರಾ ನಡೆಸುತ್ತಿದ್ದಾರೆ ಎನ್ನಲಾದ ನೀಲಿ ಚಿತ್ರಗಳ ವ್ಯವಹಾರದ ಸಂಬಂಧ ಮಂಗಳವಾರ 11 ಗಂಟೆ ವೇಳೆಗೆ ತನಿಖೆಗೆ ಹಾಜರಾಗಲು ಶೆರ್ಲಿನ್‌ಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು.