
ಶೆರ್ಲಿನ್ ಪಾಪರಾಜಿಗಳಿಗೆ ಸಂತೋಷದಿಂದ ಪೋಸ್ ನೀಡುವುದು ಮಾತ್ರವಲ್ಲದೆ ಅವರೊಂದಿಗೆ ಸಂವಹನ ನಡೆಸುತ್ತಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನೊಂದಿಗೆ ಪಾಪ್ಗಳ ಮುಂದೆ ಅಸಭ್ಯವಾಗಿ ವರ್ತಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಶೆರ್ಲಿನ್ ಒಬ್ಬ ಯುವಕನನ್ನು ಎಳೆದುಕೊಂಡು ತನ್ನ ಸಂವೇದನಾಶೀಲ ನಡೆಗಳಿಂದ ಆತನ ಜೊತೆಯಲ್ಲಿ ಕೀಟಲೆ ಮಾಡುತ್ತಿರುವುದು ಕಂಡುಬರುತ್ತದೆ. ಆತ ನಾಚಿಕೆಪಡುತ್ತಾನೆ ಮತ್ತು ವಿರೋಧಿಸಲು ಪ್ರಯತ್ನಿಸಿದಾಗ, ಶೆರ್ಲಿನ್ ಅವನನ್ನು ತನ್ನ ಹತ್ತಿರಕ್ಕೆ ಎಳೆದಿದ್ದಾರೆ. ಕೆಲವು ಟ್ವಿಟ್ಟರ್ ಬಳಕೆದಾರರಿಗೆ ಈ ವೀಡಿಯೊ ಇಷ್ಟವಾಗಿಲ್ಲ. ಹೀಗಾಗಿ ಶೆರ್ಲಿನ್ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಓರ್ವ ಟ್ವೀಟಿಗ ಶೆರ್ಲಿನ್ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಈ ಮಹಿಳೆ ಎಲ್ಲಿರ್ತಾಳೋ ಅಲ್ಲಿ ಅಸಭ್ಯ ವರ್ತನೆ ಇರುತ್ತದೆ. ಇದು ಪುರುಷರ ಮೇಲೆ ನಡೆದ ಲೈಂಗಿಕ ದೌರ್ಜನ್ಯವಲ್ಲದೇ ಇನ್ನೇನು ಎಂದಿದ್ದಾರೆ. ಅಲ್ಲದೇ ಇನ್ನೂ ಕೆಲವರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.