ಸರಪಳಿಯಲ್ಲಿ ಬಂಧಿಯಾದ ಸಿಂಹದ ಮುಂದೆ ಗುಂಪೊಂದು ಹರಟೆ ಕೊಚ್ಚುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಸಿಂಹದ ಮುಂದೆ ಫೋಟೋ ಕ್ಲಿಕ್ಕಿಸಲು ಸುತ್ತಲೂ ಒಟ್ಟುಗೂಡಿದ ಗುಂಪಿನ ವಿಡಿಯೊ ತೆಗೆಯಲಾಗಿದ್ದು, ಆ ಫೋಟೋ ವಿಶೇಷ ಸೆಷನ್ ಈಗ ವೈರಲ್ ಆಗಿದೆ.
ವಿಡಿಯೋ ಕ್ಲಿಪ್ನ ಅಂತ್ಯದಲ್ಲಿ, ಸಿಂಹವು ತನ್ನ ಸ್ಥಾನದಿಂದ ಮೇಲಕ್ಕೆ ಎದ್ದೇಳುತ್ತಿದ್ದಂತೆ ಎದುರಿಗಿದ್ದವರು ಓಟ ಕೀಳುವುದನ್ನು ಕಾಣಬಹುದು.
ಒಬ್ಬ ವ್ಯಕ್ತಿ ಚಿತ್ರೀಕರಿಸಲು ಪ್ರಾರಂಭಿಸಿದಾಗ “ಶೇರಾ ದಿ ಪುತ್ತರ್ ಶೇರ್ (ಸಿಂಹದ ಮರಿ ಯಾವಾಗಲೂ ಸಿಂಹ)” ಎಂದು ಜೋರಾಗಿ ಕೂಗುತ್ತಾನೆ. ಮುಂದಿನ ಸೆಕೆಂಡಿನಲ್ಲಿಯೇ, ಶಾಂತವಾಗಿ ಕುಳಿತಿದ್ದ ನಾಲ್ಕು ಕಾಲಿನ ಸಿಂಹ ಇದ್ದಕ್ಕಿದ್ದಂತೆ ದೊಡ್ಡ ಶಬ್ದದಿಂದ ಕೆರಳುತ್ತದೆ. ಈ ವೇಳೆ ಸಿಂಹವನ್ನು ನಿಯಂತ್ರಿಸುವ ವ್ಯಕ್ತಿಯು ಅದರ ಕುತ್ತಿಗೆಗೆ ಹಾಕಿದ್ದ ಚೈನನ್ನು ಎಳೆದು ನಿಯಂತ್ರಿಸಲು ಪ್ರಯತ್ನಿಸುತ್ತಾನೆ. ಆದರೆ, ಅಷ್ಟರವರೆಗೆ ಬಡಾಯಿ ಕೊಚ್ಚುತ್ತಿದ್ದವರು ಅಲ್ಲಿಂದ ಓಟ ಕೀಳುವುದು ವಿಡಿಯೋ ವೀಕ್ಷಕರಲ್ಲಿ ನಗು ತರಿಸುತ್ತದೆ.
ವೈರಲ್ ಆಗಿರುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಸಹ ಕಾರಣವಾಗಿದೆ. ಅಲ್ಲಿದ್ದವರು ಪ್ರಾಣಿಯನ್ನು ತಪ್ಪಾಗಿ ನಿರ್ವಹಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ, ಸಿಂಹವನ್ನು ಈ ರೀತಿ ಹಿಡಿದಿಟ್ಟುಕೊಳ್ಳಲು ಅವರಿಗೆ ಹಕ್ಕಿಲ್ಲ ಎಂದು ಟೀಕಿಸಿದ್ದಾರೆ. ಅಲ್ಲಿದ್ದ ಪ್ರತಿಯೊಬ್ಬರ ವಿರುದ್ಧ ಮೊಕದ್ದಮೆ ಹೂಡಬೇಕು ಎಂದು ಒಬ್ಬರು ಸಲಹೆ ಕೂಡ ನೀಡಿದ್ದಾರೆ.
https://twitter.com/hhzameerjafar/status/1553754041330634755?ref_src=twsrc%5Etfw%7Ctwcamp%5Etweetembed%7Ctwterm%5E1553754041330634755%7Ctwgr%5E08b8d6af18d9c6c51249acac418711efab0103e2%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fshera-de-puttar-sher-mens-bragging-goes-wrong-as-leashed-lion-rears-up-5665231.html