ದೇಶದಲ್ಲಿ ಸಾರ್ವಜನಿಕ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ ಕಳೆದ ಹಲವು ದಿನಗಳಿಂದ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಇದರ ಮಧ್ಯೆ ಶೆಲ್ ಇಂಡಿಯಾ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.
ಕಳೆದ ಒಂದು ವಾರದ ಅವಧಿಯಲ್ಲಿ ಶೆಲ್ ಇಂಡಿಯಾ, ಪ್ರತಿ ದಿನ 4 ರೂಪಾಯಿಗಳಂತೆ ಡೀಸೆಲ್ ಬೆಲೆಯಲ್ಲಿ 20 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದೀಗ ಶೆಲ್ ಇಂಡಿಯಾ ಬಂಕ್ ಗಳಲ್ಲಿ ಡೀಸೆಲ್ ದರ ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ಗೆ 130 ರೂಪಾಯಿಗಳಾಗಿದ್ದು, ಚೆನ್ನೈನಲ್ಲಿ 129 ರೂಪಾಯಿಗಳಾಗಿದೆ.
ವಿಶ್ವದ ಎರಡನೇ ಅತಿ ದೊಡ್ಡ ಗ್ಯಾಸ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಶೆಲ್ ಇಂಡಿಯಾ, ಕ್ವಾಲಿಟಿ ಹಾಗೂ ಕ್ವಾಂಟಿಟಿ ಕಾರಣಕ್ಕೂ ಗ್ರಾಹಕರಿಗೆ ಅಚ್ಚುಮೆಚ್ಚಿನದ್ದಾಗಿದೆ. ಈ ಮೊದಲು ಸಹ ಶೆಲ್ ಇಂಡಿಯಾ ಬಂಕ್ ಗಳಲ್ಲಿ ಬೆಲೆ ಹೆಚ್ಚಿದ್ದರೂ ಅಲ್ಲಿಗೆ ಹೋಗಿ ಗ್ರಾಹಕರು ಪೆಟ್ರೋಲ್ – ಡೀಸೆಲ್ ಹಾಕಿಸಿಕೊಳ್ಳುತ್ತಿದ್ದರು.
ಶೆಲ್ ಇಂಡಿಯಾ ಭಾರತದಲ್ಲಿ 346 ಬಂಕ್ಗಳನ್ನು ಹೊಂದಿದ್ದು, ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 117-118 ರೂಪಾಯಿಗಳಾಗಿದ್ದರೆ, ಇತರೆ ಬಂಕ್ ಳಲ್ಲಿ ಇದರ ಬೆಲೆ ಪ್ರತಿ ಲೀಟರ್ಗೆ 103-106 ರೂಪಾಯಿ ಆಸುಪಾಸಿನಲ್ಲಿದೆ. ಹಾಗೆ ಡೀಸೆಲ್ ಬೆಲೆ ಶೆಲ್ ಇಂಡಿಯಾದಲ್ಲಿ 129-130 ರೂಪಾಯಿಗಳಾಗಿದ್ದರೆ ಇತರೆ ಬಂಕ್ ಗಳಲ್ಲಿ 94-95 ರೂಪಾಯಿ ಆಸುಪಾಸಿನಲ್ಲಿದೆ.