ಬಾಂಗ್ಲಾದೇಶದಲ್ಲಿ ಹಲವು ವಾರಗಳ ಪ್ರತಿಭಟನೆ, ಹಿಂಸಾಚಾರದ ನಂತರ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ.
ಇದರ ನಡುವೆ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಮನೆಯೊಳಗಿನ ಆಹಾರವನ್ನು ಸವಿಯುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಉಂಡು ಹೋದ, ಕೊಂಡು ಹೋದ ಎಂಬ ಮಾತಿದೆ. ಅಂತೆಯೇ ಕೈಗೆ ಸಿಕ್ಕ ತಿನಿಸನ್ನು ಸವಿಯುತ್ತಾ ಮನೆಯನ್ನು ಲೂಟಿ ಮಾಡಿ ಹೋಗಿದ್ದಾರೆ.
ಢಾಕಾದ ಪ್ರಧಾನಿ ನಿವಾಸದೊಳಗೆ ಲೂಟಿ ಮಾಡಿದ ಪ್ರತಿಭಟನಾಕಾರರು ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜುತ್ತಿರುವ ವೀಡಿಯೊಗಳು ವೈರಲ್ ಆಗಿದೆ. ಪ್ರಧಾನಿ ನಿವಾಸದಲ್ಲಿ ಪ್ರತಿಭಟನಾಕಾರರು ಪುಸ್ತಕಗಳು ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ವೀಡಿಯೊ ತೋರಿಸಿದೆ.