
ಬಾಗಲಕೋಟೆ: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಇಬ್ಬರು ಮಹಿಳೆಯರು ಸಜೀವದಹನವಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ತಗಡಿನ ಶೆಡ್ ಗೆ ಪೆಟ್ರೋಲ್ ಸುರಿದು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಶೆಡ್ ನಲ್ಲಿದ್ದ ಇಬ್ಬರು ಮಹಿಳೆಯರು ಸಜೀವದಹನವಾಗಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿಯಲ್ಲಿ ಈ ಘಟನೆ ನಡೆದಿದೆ.
ಬೆಳಗಲಿ ಗ್ರಾಮದ ಜೈಬಾನ್ (55) ಹಾಗೂ ಶಬಾನ್ (25) ಮೃತ ಮಹಿಳೆಯರು. ಗಾಯಾಳುಗಳಾದ ದಸ್ತಗಿರಿಸಾಬ್, ಸುಬಾನ್ ಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.