
ಜೈಪುರದಲ್ಲಿ ನಡೆದ ಆಘಾತಕಾರಿ ಮತ್ತು ನಾಚಿಕೆಗೇಡಿನ ಘಟನೆಯೊಂದರಲ್ಲಿ ಯುವಕನೊಬ್ಬ ಇನ್‌ಸ್ಟಾಗ್ರಾಮ್ ರೀಲ್ ಗಳಿಗಾಗಿ ವಿದೇಶಿ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡುವುದು ಕಂಡು ಬಂದಿದೆ. ಯುವಕ ವಿದೇಶಿ ಮಹಿಳೆಯರ “ರೇಟ್” ಕೂಡ ಫಿಕ್ಸ್ ಮಾಡಿದ್ದಾನೆ.
Instagram ಬಳಕೆದಾರ ಹೆಸರು @guru__brand0000 ಆಗಿದ್ದು, ಈ ವ್ಯಕ್ತಿ ಪ್ರವಾಸಿಗರಿಗೆ ಕಿರುಕುಳ ನೀಡುವ ಹಲವಾರು ರೀಲ್ ಗಳನ್ನು ಪೋಸ್ಟ್ ಮಾಡಿದ್ದಾನೆ. ಅವುಗಳಲ್ಲಿ ಕೆಲವು ಮಹಿಳಾ ಪ್ರವಾಸಿಗರ ಬಗ್ಗೆ ಇರುವ ಆಕ್ಷೇಪಾರ್ಹ ವಿಡಿಯೋಗಳಾಗಿವೆ.
ಈ ವೀಡಿಯೊಗಳನ್ನು ಹಂಚಿಕೊಂಡಿರುವ ಎಕ್ಸ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದು, “ಇಂತಹ ವ್ಯಕ್ತಿಗಳು ಭಾರತದಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಕೆಟ್ಟ ಅನುಭವವಾಗಲು ಕಾರಣವಾಗುತ್ತಾರೆ. @jaipur_police ಅತಿಥಿ ದೇವೋ ಭವ ಎಂದು ಪ್ರವಾಸಿಗರಿಗೆ ಕಿರುಕುಳ ನೀಡುತ್ತಿರುವ ಈ ವ್ಯಕ್ತಿಯನ್ನು ಬಂಧಿಸಿ ಮೂಲಭೂತ ನಾಗರಿಕ ಪ್ರಜ್ಞೆ ಮತ್ತು ಅರ್ಥವನ್ನು ಕಲಿಸಬೇಕು. ಎಂದು ಕ್ರಮ ಕೈಗೊಳ್ಳುಬೇಕು” ಎಂದು ಒತ್ತಾಯಿಸಿದ್ದಾರೆ.
ವೀಡಿಯೋದಲ್ಲಿ, ಗುರು ಎಂದು ಗುರುತಿಸಲಾದ ಯುವಕ, ನಾಲ್ವರು ಮಹಿಳಾ ಪ್ರವಾಸಿಗರ ಬಳಿಗೆ ಹೋಗಿ ಅವರ “ರೇಟ್” ಬಗ್ಗೆ ಹೇಳುವುದನ್ನು ಕಾಣಬಹುದು. “ಹುಡುಗರೇ, ಈ ಮಹಿಳೆಯರು ನಿಮಗೆ 150 ರೂ.ಗೆ ಸಿಗುತ್ತಾರೆ” ಎಂದು ಹೇಳುತ್ತಾನೆ. ಪ್ರತ್ಯೇಕ ಮಹಿಳೆಯರತ್ತ ಕೈ ತೋರಿಸುತ್ತಾ “ಅವಳು 150 ರೂ.ಗೆ ಲಭ್ಯವಿದ್ದಾಳೆ, ಅವಳು 200 ರೂ.ಗೆ, ನೀವು ಅವಳನ್ನು 500 ರೂ.ಗೆ ಪಡೆಯಬಹುದು ಮತ್ತು ಇದು 300 ರೂ. ಎಂದು ಮಹಿಳೆಯರನ್ನು ತೋರಿಸುತ್ತಾ ಹೇಳುತ್ತಾನೆ. ಆದರೆ ಗುರು ಏನು ಹೇಳುತ್ತಿದ್ದನೆಂದು ಆ ಮಹಿಳೆಯರಿಗೆ ತಿಳಿಯದೇ ಗುರುವಿನ ಕ್ಯಾಮೆರಾದತ್ತ ಕೈ ಬೀಸುತ್ತಾರೆ.
ಗುರು, ಪುರುಷ ಮತ್ತು ಮಹಿಳೆಯೊಂದಿಗೆ ಸ್ವತಃ ಚಿತ್ರೀಕರಿಸಿದ ಅಂತಹ ಮತ್ತೊಂದು ವೀಡಿಯೊದಲ್ಲಿ ಪ್ರವಾಸಿ ದಂಪತಿಗಳಿಗೆ ಕಿರುಕುಳ ನೀಡುತ್ತಾನೆ. ಗೈಸ್, ಅವಳು ನನ್ನ ಹೆಂಡತಿ, ಅವನು ನನ್ನ ಸೋದರಮಾವ ಎಂದೆಲ್ಲಾ ಹೇಳುತ್ತಾನೆ.
ಆತನ ಇನ್ ಸ್ಟಾಗ್ರಾಮ್ ಪ್ರೊಫೈಲ್ ಕೆಲ ಸಮಯದಿಂದ ರೀಲ್‌ಗಳ ಸಲುವಾಗಿ ಜೈಪುರದಲ್ಲಿ ಪ್ರವಾಸಿಗರಿಗೆ ಕಿರುಕುಳ ನೀಡುತ್ತಿರುವುದನ್ನು ತೋರಿಸುತ್ತದೆ. ಅವನು ಆಗಾಗ್ಗೆ ತನ್ನ ಕ್ಯಾಮೆರಾವನ್ನು ಅವರ ಮೇಲೆ ಎಸೆಯುವುದನ್ನು ಮತ್ತು ಅವರೊಂದಿಗೆ ತನ್ನನ್ನು ತಾನು ರೆಕಾರ್ಡ್ ಮಾಡಿಕೊಳ್ಳುವುದನ್ನು ಕಾಣಬಹುದು. ಅಷ್ಟೇ ಅಲ್ಲ ಬೈಕ್ ಸ್ಟಂಟ್ ಮಾಡುವ ರೀಲ್ ಗಳನ್ನೂ ಪೋಸ್ಟ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣ ಬಳಕೆದಾರರಿಂದ ಗುರು ವಿರುದ್ಧ ಪೊಲೀಸ್ ಕ್ರಮಕ್ಕೆ ಆಗ್ರಹ
X ನಲ್ಲಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಗುರುವಿನ ವೀಡಿಯೊಗಳ ಅಡಿಯಲ್ಲಿ ಜೈಪುರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರವಾಸಿಗರಿಗೆ ಕಿರುಕುಳ ನೀಡುವ ಮೂಲಕ ಯುವಕ ಜೈಪುರದ ಹೆಸರನ್ನು ಹಾಳುಮಾಡಿದ್ದಾನೆ ಎಂದು ಹಲವಾರು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ, ಜೈಪುರ ಪೊಲೀಸರು, “ಮೇಲೆ ತಿಳಿಸಿದ ವಿಷಯದಲ್ಲಿ ಸೂಕ್ತ ಕಾನೂನು ಕ್ರಮಕ್ಕಾಗಿ ಉನ್ನತ ಅಧಿಕಾರಿಗಳಿಗೆ ತಿಳಿಸಲಾಗಿದೆ” ಎಂದು ಹೇಳಿದ್ದಾರೆ.




