ಶತ್ರುಘ್ನ ಸಿನ್ಹಾ, ಬಾಲಿವುಡ್ನ ಪ್ರಸಿದ್ಧ ನಟರಲ್ಲಿ ಒಬ್ಬರು. ಅವರು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ಸಮಯದಲ್ಲಿ ಕೆಲವರ ಜೊತೆ ಸಂಬಂಧದಲ್ಲಿದ್ದರು ಎಂಬ ಸುದ್ದಿ ಹರಡಿತ್ತು. ಆದ್ರೆ ಮದುವೆ ಆಗ್ತಿದ್ದಂತೆ ಶತ್ರುಘ್ನ ಸಿನ್ಹಾ ಎಲ್ಲ ಆಟಗಳು ನಿಂತಿದ್ದವು. ಆ ದಿನಗಳ ಬಗ್ಗೆ ಆಗಾಗ ಚರ್ಚೆ ಆಗ್ತಿರುತ್ತದೆ. ಶತ್ರುಘ್ನ ಸಿನ್ಹಾ ಕೂಡ ತನ್ನ ಯೌವನದ ಚೇಷ್ಟೆಗಳನ್ನು ಹೇಳಲು ಹಿಂಜರಿಯುವುದಿಲ್ಲ.
ಶತ್ರುಘ್ನ ಸಿನ್ಹಾ ತಮ್ಮ ಪತ್ನಿ ಪೂನಂ ಸಿನ್ಹಾ ಅವರೊಂದಿಗೆ ದಿ ಕಪಿಲ್ ಶರ್ಮಾ ಶೋಗೆ ಬಂದಾಗ, ಆ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಶತ್ರುಘ್ನ ಸಿನ್ಹಾ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಾ ಎಂಬ ಪ್ರಶ್ನೆಗೆ ಸಿನ್ಹಾ ವಿವರವಾದ ಉತ್ತರ ನೀಡಿದ್ದಾರೆ.
ಈ ಸಮಯದಲ್ಲಿ ಶತ್ರುಘ್ನ ಸಿನ್ಹಾ ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡರಲ್ಲದೆ, ಅದರಿಂದ ಕಲಿತ ಪಾಠವನ್ನು ಎಲ್ಲರ ಮುಂದಿಟ್ಟಿದ್ದಾರೆ. ಒಮ್ಮೆ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದೆ ಎಂದಿದ್ದಾರೆ. ಒಮ್ಮೆ ಸಿಕ್ಕಿಬಿದ್ದೆ. ಮದುವೆಗೆ ಮುಂಚೆ ಅಲ್ಲದಿದ್ದರೂ ಒಮ್ಮೆ ಸಿಕ್ಕಿಬಿದ್ದೆ. ಸಿಕ್ಕಿಬೀಳಬೇಕಾದಾಗ ಸಿಕ್ಕಿರಲಿಲ್ಲ. ಮದುವೆಯ ನಂತರ ಸಿಕ್ಕಿಬೀಳಬಾರದಾಗ ಸಿಕ್ಕಿಬಿದ್ದ. ಆ ಸಮಯದಲ್ಲಿ ನನ್ನ ಹೆಂಡತಿ ಬಂದು ಗದರಿಸಿದ್ದಳು, ನನ್ನ ಮುಖದ ಮೇಲಿನ ಕಲೆಗಳು ಹೆಚ್ಚಾಗುವಷ್ಟು ಹೊಡೆದಿದ್ದಳು ಎಂದಿದ್ದಾರೆ.
ಅಷ್ಟೇ ಅಲ್ಲ, ನಿಮಗೆ ನಾಚಿಕೆ ಆಗಲ್ವಾ, ಮಕ್ಕಳಿದ್ದಾರೆ. ಈಗ ಇಂಥ ಕೆಲಸ ಮಾಡ್ತೀರಾ. ಇದೇ ಕೊನೆ, ಇನ್ಮುಂದೆ ಯಾವುದೇ ಹುಡುಗಿ ಜೊತೆ ಕಾಣಿಸಿಕೊಂಡ್ರೆ ಕ್ಷಮೆ ಇಲ್ಲ. ನನ್ನಷ್ಟು ಕೆಟ್ಟವರು ಯಾರೂ ಇರೋದಿಲ್ಲ ಎಂದು ಪತ್ನಿ ಗದರಿದ್ದಳು ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ನಟಿ ರೀನಾ ರಾಯ್ ಮತ್ತು ಶತ್ರುಘ್ನ ಸಿನ್ಹಾ ಮಧ್ಯೆ ಪ್ರೀತಿ ಚಿಗುರಿತ್ತು. ಮಿಲಾಪ್ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಇಬ್ಬರೂ ಭೇಟಿಯಾಗಿದ್ದರು. ಆಗ ಶತ್ರುಘ್ನ ಸಿನ್ಹಾ ಅವರಿಗೆ ಮದುವೆ ಆಗಿರಲಿಲ್ಲ. ಎರಡನೇ ಚಿತ್ರ ಸಂಗ್ರಾಮ್ ಸಮಯದಲ್ಲಿ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು. ರೀನಾ ರಾಯ್ ಶತ್ರುಘ್ನ ಸಿನ್ಹಾ ಅವರೊಂದಿಗೆ ಗಂಭೀರ ಸಂಬಂಧವನ್ನು ಹೊಂದಿದ್ದರು. ಅವರಿಬ್ಬರು ಸುಮಾರು 15 ಚಲನಚಿತ್ರಗಳನ್ನು ಒಟ್ಟಿಗೆ ಮಾಡಿದ್ದರು.