ತಮ್ಮ ನಿರರ್ಗಳ ಇಂಗ್ಲಿಷ್‌ಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಸದಾ ತಮ್ಮ ಟ್ವೀಟ್ಗಳಿಂದ ವೈರಲ್ ಆಗುತ್ತಲೇ ಇರುತ್ತಾರೆ.
ಡಿಕ್ಷನರಿಯನ್ನು ಹುಡುಕುವಂಥ ಇಂಗ್ಲಿಷ್ ಪದಗಳ ಬಳಕೆ ಮಾಡುತ್ತಾ ಇವರು ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ಅಚ್ಚರಿಗೊಳಿಸುವುದು ಇದೆ. ಇವರ ಇಂಗ್ಲಿಷ್ ಪದದ ಅರ್ಥ ಹುಡುಕಲು ಹಲವರು ಪೇಚಾಟಕ್ಕೆ ಸಿಲುಕುವುದೂ ನಡೆದೇ ಇರುತ್ತದೆ. ವಿಶೇಷಣ ತುಂಬಿದ ಹಾಸ್ಯದ ಟ್ವೀಟ್ಗೆ ತರೂರು ಪ್ರಸಿದ್ಧರು. ಇದೀಗ ಅಂಥದ್ದೇ ಒಂದು ಟ್ವೀಟ್ ವೈರಲ್ ಆಗಿದೆ.
ಶಶಿ ತರೂರು ಅಪಘಾತವೊಂದರ ಕುರಿತು ಟ್ವೀಟ್ ಮಾಡಿದ್ದಾರೆ ‘ಟ್ರಕ್ ಒಂದರ ಅಪಘಾತ ಇದು. ಇದರ ಫೋಟೋ ಶೇರ್ ಮಾಡಿಕೊಂಡಿರುವ ತರೂರು, ಇದು ದುರದೃಷ್ಟಕರ ಎಂದಿದ್ದಾರೆ. ಆದರೆ ಇದರ ಕುರಿತು ವಿವರಿಸುವ ದೀರ್ಘವಾದ ಪಠ್ಯವನ್ನು ಅವರು ಬರೆದಿದ್ದಾರೆ.
ಇದನ್ನು ಓದಿದ ನೆಟ್ಟಿಗರು ಹೌಹಾರಿದ್ದಾರೆ. ಇವರೇನು ಬರೆಯಲು ಹೊರಟಿದ್ದಾರೆ ಎಂದು ಗೊಂದಲಕ್ಕೆ ಒಳಗಾಗಿದ್ದಾರೆ. ಇಷ್ಟೇ ವಿಶೇಷಣಗಳು ಸಾಕಾ ಎಂದು ಕಾಲೆಳೆದಿದ್ದಾರೆ.