ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕಿಯೊಬ್ಬಳ ಜೀವ ಉಳಿಸುವ ಸಲುವಾಗಿ ಅಮೆರಿಕಾದಿಂದ ಅತಿ ದುಬಾರಿ ಇಂಜೆಕ್ಷನ್ ಒಂದನ್ನು ತರಿಸಲಾಗುತ್ತಿದ್ದು, ಇದಕ್ಕೆ ಏಳು ಲಕ್ಷ ರೂಪಾಯಿ GST ತಗಲುತ್ತಿತ್ತು. ಸಂಸದ ಶಶಿ ತರೂರ್ ಮನವಿಗೆ ಸ್ಪಂದಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಈಗ ಇದಕ್ಕೆ ವಿನಾಯಿತಿ ನೀಡಿದ್ದಾರೆ.
ನಿಹಾರಿಕಾ ಎಂಬ ಈ ಬಾಲಕಿ ನ್ಯುರೋಬ್ಲಾಸ್ಟ್ರೋಮ ಎಂಬ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗ ನಾಲ್ಕನೇ ಹಂತದಲ್ಲಿದೆ. ಹೀಗಾಗಿ ಆಕೆಯ ಪ್ರಾಣ ಉಳಿಸುವ ಸಲುವಾಗಿ ಡಿನುಟುಕ್ಸಿಮ್ಯಾಮ್ ಬೆಟಾ ಎಂಬ ಇಂಜೆಕ್ಷನ್ ಅಗತ್ಯವಿದ್ದು ಇದನ್ನು ಅಮೆರಿಕಾದಿಂದ ತರಿಸಬೇಕಾಗಿತ್ತು.
ಈ ಇಂಜೆಕ್ಷನ್ ಗೆ ಏಳು ಲಕ್ಷ ರೂಪಾಯಿಗಳಾಗಿದ್ದು, ಇತರೆ ಚಿಕಿತ್ಸೆ ವೆಚ್ಚ 63 ಲಕ್ಷ ರೂಪಾಯಿ ತಗುಲಲಿತ್ತು. ಅಲ್ಲದೆ ಇಂಜೆಕ್ಷನ್ ಮೇಲೆ ಏಳು ಲಕ್ಷ ರೂಪಾಯಿ GST ವಿಧಿಸಲಾಗುತ್ತಿತ್ತು. ಇದೀಗ ಶಶಿ ತರೂರ್ ಮನವಿ ಮೇರೆಗೆ ಜಿ.ಎಸ್.ಟಿ. ಮೇಲೆ ವಿನಾಯಿತಿ ನೀಡಲಾಗಿದೆ.