ಇತ್ತೀಚೆಗಷ್ಟೇ ತಮ್ಮ ಪತ್ನಿಯ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ತಮ್ಮ ಮೇಲಿದ್ದ ಆರೋಪಗಳಿಗೆ ಕೋರ್ಟ್‍ನಿಂದಲೇ ಖುಲಾಸೆ ಪಡೆದು ನಿಟ್ಟುಸಿರುಬಿಡುತ್ತಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಓಣಂ ಹಬ್ಬವನ್ನು ಸಾಂಪ್ರದಾಯಿಕವಾಗಿ ಸಂಭ್ರಮಿಸಿದ್ದಾರೆ. ‘ಓಣಂ ಊಂಜಲ್’ ಎನ್ನಲಾಗುವ ಉಯ್ಯಾಲೆಯಲ್ಲಿ ಕೂತು ಜೀಕುವ ಪದ್ಧತಿಯನ್ನು ತಪ್ಪಿಸದೆಯೇ, ತಮ್ಮ ತಾಯಿಯ ತವರಿನಲ್ಲಿ ಉಯ್ಯಾಲೆಯಲ್ಲಿ ಕುಳಿತು ನಗೆ ಬೀರಿದ್ದಾರೆ.
BIG NEWS: ಟೆಂಡರ್ ಹಗರಣದಲ್ಲಿ ಮಾಜಿ ಸಚಿವ ಅರೆಸ್ಟ್ ಬೆನ್ನಲ್ಲೇ ಬಿಜೆಪಿ ಬಿಗ್ ಶಾಕ್
ತಮ್ಮ ಸಂಭ್ರಮದ 30 ಸೆಕೆಂಡ್‍ಗಳ ವಿಡಿಯೊವೊಂದನ್ನು ಅವರು ಟ್ವಿಟರ್ ನ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಾಲಕ್ಕಾಡ್‍ನಲ್ಲಿ ತಮ್ಮ ಪೂರ್ವಿಕರ ಮನೆಯಲ್ಲಿ ಅವರು ಉಯ್ಯಾಲೆ ಆಟವಾಡಿದ್ದಾರೆ. ಸಣ್ಣ ಹೆಣ್ಣುಮಕ್ಕಳು ಹೆಚ್ಚಾಗಿ ಉಯ್ಯಾಲೆಯಲ್ಲಿ ಸಂಭ್ರಮಪಡುವ ಸಂಪ್ರದಾಯ ಕೇರಳದಲ್ಲಿದೆ.
ಕೆಂಪು ಕುರ್ತಾ, ಕೇರಳದ ಜರಿ ಪಂಚೆಯಲ್ಲಿ ನೀವು ತುಂಬ ಮುದ್ದಾಗಿ ಕಾಣಿಸುತ್ತಿದ್ದೀರಿ ಎಂದು ವಿಡಿಯೊ ನೋಡಿದ ತರೂರ್ ಅವರ ಮಹಿಳಾ ಅಭಿಮಾನಿಗಳು ಕಮೆಂಟ್‍ನಲ್ಲಿ ಹಾಡಿಹೊಗಳಿದ್ದಾರೆ!
https://twitter.com/ThoratDamini/status/1428938068224999430?ref_src=twsrc%5Etfw%7Ctwcamp%5Etweetembed%7Ctwterm%5E1428938068224999430%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fshashi-tharoor-enjoys-the-swing-tradition-on-onam-2021-watch-viral-video-1843739-2021-08-21