alex Certify ನಿಶ್ಚಿತಾರ್ಥ ಮುರಿದುಬಿದ್ದ ವದಂತಿ ಮಧ್ಯೆ ನಟ ಶರ್ವಾನಂದ್ ಮದುವೆ ಡೇಟ್ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಶ್ಚಿತಾರ್ಥ ಮುರಿದುಬಿದ್ದ ವದಂತಿ ಮಧ್ಯೆ ನಟ ಶರ್ವಾನಂದ್ ಮದುವೆ ಡೇಟ್ ಫಿಕ್ಸ್

ನಟ ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿಯವರ ವಿವಾಹ ಜೂನ್ 3 ರಂದು ನಡೆಯಲಿದೆ ಎಂದು ವರದಿಯಾಗಿದೆ. ಇತ್ತೀಚಿಗೆ ಇಬ್ಬರ ಎಂಗೇಜ್ ಮೆಂಟ್ ಮುರಿದುಬಿದ್ದಿದೆ ಎಂಬ ವದಂತಿಗಳ ನಡುವೆ ಅವರ ಮದುವೆ ದಿನಾಂಕ ನಿಶ್ಚಯವಾಗಿರೋದು ಬಹಿರಂಗವಾಗಿದೆ.

ಯುಎಸ್ ಮೂಲದ ಟೆಕ್ಕಿ ರಕ್ಷಿತಾ ರೆಡ್ಡಿ ಅವರೊಂದಿಗೆ ನಟ ಶರ್ವಾನಂದ್ ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ರಾಜಸ್ಥಾನದ ಜೈಪುರದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಈಗಾಗಲೇ ಮದುವೆಯ ಆಮಂತ್ರಣಗಳು ಹೊರಬಿದ್ದಿವೆ. ಜೈಪುರದ ಲೀಲಾ ಪ್ಯಾಲೇಸ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ.

ಮದುವೆಯ ಪೂರ್ವ ಸಮಾರಂಭಗಳಿಗೆ ಸಂಬಂಧಿಸಿದಂತೆ ಜೂನ್ 2 ರಂದು ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮದುವೆಯ ದಿನವೇ ಶರ್ವಾನಂದ್ ಅವರ ಹಳದಿ ಶಾಸ್ತ್ರ ಕಾರ್ಯಕ್ರಮವೂ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...