ನೇಲ್ ಕಟರ್, ಕತ್ತರಿ, ಚಾಕು, ಸ್ಕ್ರೂಡ್ರೈವರ್‌ಗಳಂತಹ ಉಪಕರಣಗಳು ಪ್ರತಿ ಮನೆಯಲ್ಲೂ ಇರುತ್ತವೆ. ಇವುಗಳ ನಿರ್ವಹಣೆಗೆ ಕೂಡ ಕೆಲವು ನಿಯಮಗಳಿವೆ ಅನ್ನೋದು ಅನೇಕರಿಗೆ ತಿಳಿದಿಲ್ಲ. ಇವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ದಾಂಪತ್ಯ ಜೀವನದ ಸಂತೋಷವೂ ಮಾಯವಾಗುತ್ತದೆ. ಚೂಪಾದ ಅಥವಾ ಮೊನಚಾದ ವಸ್ತುಗಳನ್ನು ಯಾವಾಗಲೂ ಮುಚ್ಚಿಯೇ ಇಡಬೇಕು. ಇವುಗಳನ್ನು ತೆರೆದ ಸ್ಥಳದಲ್ಲಿ ಇಡುವುದು ಮಂಗಳಕರವಲ್ಲ.
ತೀಕ್ಷ್ಣವಾದ ವಸ್ತುಗಳನ್ನು ಇಟ್ಟುಕೊಳ್ಳುವುದು ಹೇಗೆ?
ಉಗುರು ಕತ್ತರಿಸಲು ಬಳಸುವ ನೇಲ್ ಕಟ್ಟರ್ ಸೇರಿದಂತೆ ದೈನಂದಿನ ಕೆಲಸಕ್ಕೆ ಬಳಸುವ ಮೊನಚಾದ ವಸ್ತುಗಳನ್ನು ಟೂಲ್ ಬಾಕ್ಸ್‌ನಲ್ಲಿ ಇಡಬೇಕು. ಇವೆಲ್ಲವನ್ನೂ ಪೇಪರ್ ಅಥವಾ ಬಟ್ಟೆಯಲ್ಲಿ ಸುತ್ತಿ ಇಡಬೇಕು. ಇದನ್ನು ಇಡಲು ಪ್ರತ್ಯೇಕ ಕವರ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೇಲ್ ಕಟರ್, ಟೂಲ್ಸ್, ಕತ್ತರಿ ಅಥವಾ ಚಾಕುಗಳನ್ನು ಹೊರಗಡೆ ಇಟ್ಟುಕೊಂಡರೆ ಕೋಪ ಹೆಚ್ಚಾಗುತ್ತದೆ. ಮನೆಯ ಸದಸ್ಯರ ನಡುವೆ ಜಗಳವಾಗಬಹುದು.
ಸಂಬಂಧಗಳಲ್ಲಿ ಬಿರುಕು ತರಬಹುದು ಕತ್ತರಿ!
ಯಾವುದೇ ಕಾರಣವಿಲ್ಲದೆ ಕತ್ತರಿಗಳನ್ನು ಬಳಸಬಾರದು. ಆ ರೀತಿ ಮಾಡಿದರೆ ಮನೆಯಲ್ಲಿ ವಾದ-ವಿವಾದ ಮತ್ತು ಜಗಳಗಳು ಉಂಟಾಗಬಹುದು. ಅದು ಸಂಬಂಧವನ್ನು ಹಾಳುಮಾಡುತ್ತದೆ. ನಿಮ್ಮ ಮನೆಗೆ ಯಾರಾದರೂ ಕತ್ತರಿ ಕೇಳಲು ಬಂದರೆ ಕೊಡಬೇಡಿ. ಅಪ್ಪಿತಪ್ಪಿಯೂ ಇತರರಿಗೆ ಕತ್ತರಿ ಕೊಡಬಾರದು, ಇದು ಸಂಬಂಧಗಳಲ್ಲಿ ಬಿರುಕು ಉಂಟುಮಾಡಬಹುದು.
ಅಡುಗೆಮನೆಯಲ್ಲಿ ಚಾಕು ಹೇಗಿರಬೇಕು?
ಚಾಕುವಿನ ಅಂಚು ಕೂಡ ನಮ್ಮ ಹಣೆಬರಹದ ಮೇಲೆ ಪರಿಣಾಮ ಬೀರುತ್ತದೆ. ಚಾಕುವನ್ನು ಯಾವಾಗಲೂ ಅಡುಗೆಮನೆಯಲ್ಲಿ ತಲೆಕೆಳಗಾಗಿ ಇಡಬೇಕು ಅಂದರೆ ಚೂಪಾದ ಭಾಗ ಕೆಳಮುಖವಾಗಿರಬೇಕು. ಹರಿತವಿಲ್ಲದ ಅಥವಾ ತುಕ್ಕು ಹಿಡಿದ ಚಾಕುವನ್ನು ಮನೆಯಲ್ಲಿ ಇಡಬಾರದು. ಅದು ನಮ್ಮ ಅದೃಷ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಕೆಲವರು ವಿವಿಧ ಗಾತ್ರದ ಚಾಕುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ತುಂಬಾ ದೊಡ್ಡದಾದ ಚಾಕು ವೈವಾಹಿಕ ಜೀವನವನ್ನು ಹಾಳುಮಾಡುತ್ತದೆ. ತೀಕ್ಷ್ಣವಾದ ವಸ್ತುಗಳೊಂದಿಗೆ ವ್ಯವಹರಿಸುವಾಗ, ಹ್ಯಾಂಡಲ್ ಭಾಗವನ್ನು ಮುಂದಕ್ಕೆ ಇಡಬೇಕು. ಇದು ಸಂಬಂಧಗಳ ಸುರಕ್ಷತೆ ಮತ್ತು ದೈಹಿಕ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ಬಳಸಿದ ನಂತರ ಅವುಗಳನ್ನು ತೊಳೆದು ಸರಿಯಾದ ಸ್ಥಳದಲ್ಲಿ ಇಡಬೇಕು.