ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಪ್ರಮುಖ ಸುದ್ದಿಯೊಂದಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಮತ್ತು ನೀವು ಡಿಮ್ಯಾಟ್ ಖಾತೆ ಅಥವಾ ಟ್ರೇಡಿಂಗ್ ಖಾತೆಯನ್ನು ಹೊಂದಿದ್ದರೆ ಕೆವೈಸಿ ಮಾಡುವುದು ಅನಿವಾರ್ಯವಾಗಿದೆ. ಮಾರ್ಚ್ 31 ರೊಳಗೆ ಕೆವೈಸಿ ಮಾಡುವುದು ಕಡ್ಡಾಯವೆಂದು ಮೂಲಗಳು ಹೇಳಿವೆ. ಇಲ್ಲವಾದ್ರೆ ನಿಮ್ಮ ಖಾತೆ ನಿಷ್ಕ್ರಿಯಗೊಳ್ಳಲಿದೆ.
ಠೇವಣಿದಾರರಾದ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಮತ್ತು ಸೆಂಟ್ರಲ್ ಡಿಪಾಸಿಟರಿಸ್ ಸರ್ವಿಸಸ್ ಲಿಮಿಟೆಡ್ ಹೊರಡಿಸಿದ ಸುತ್ತೋಲೆಯಲ್ಲಿ ಕೆವೈಸಿ ಬಗ್ಗೆ ಮಾಹಿತಿ ನೀಡಲಾಗಿದೆ. ಕೆವೈಸಿ ಪ್ರಕ್ರಿಯೆಯಲ್ಲಿ ಹೆಸರು, ವಿಳಾಸ, ಪ್ಯಾನ್, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ಆದಾಯ ಶ್ರೇಣಿಯ ಮಾಹಿತಿ ನೀಡಬೇಕಾಗುತ್ತದೆ.
ಜೂನ್ 1, 2021 ರ ನಂತರ ತೆರೆಯಲಾದ ಹೊಸ ಖಾತೆಗಳಿಗೆ ಈ ಎಲ್ಲ 6 ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಇದಲ್ಲದೆ ಹೂಡಿಕೆದಾರರು ಆದಾಯ ತೆರಿಗೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪಾನ್ ಕಾರ್ಡ್ ಅನ್ನು ಪರಿಶೀಲಿಸಬೇಕು. ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಹೋದಲ್ಲಿ ಅದನ್ನು ಅಮಾನ್ಯ ಮಾಡಲಾಗುವುದು. ಎಲ್ಲಾ ಖಾತೆದಾರರು ಪ್ರತ್ಯೇಕ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಹೊಂದಿರಬೇಕು. ಖಾತೆದಾರರು ತಮ್ಮ ಆದಾಯ ಶ್ರೇಣಿಯನ್ನು ಬಹಿರಂಗಪಡಿಸಬೇಕು.