ಶೀಘ್ರದಲ್ಲೇ ಐಸಿಸಿ ಟಿ-20 ವಿಶ್ವಕಪ್ 2021 ಕ್ಕೆ ಟೀಮ್ ಇಂಡಿಯಾ ಘೋಷಣೆಯಾಗಲಿದೆ. ಆದ್ರೆ ವೇಗದ ಬೌಲರ್ ಶಾರ್ದೂಲ್ ಠಾಕೂರ್ 15 ಆಟಗಾರರ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ.
ಭುವನೇಶ್ವರ್ ಕುಮಾರ್, ವೇಗದ ಬೌಲರ್ ಶಾರ್ದೂಲ್ ಠಾಕೂರ್‌ಗೆ ದೊಡ್ಡ ಹೊಡೆತ ನೀಡಲಿದ್ದಾರೆ. ಭುವಿ ನಿರ್ಣಾಯಕ ಕ್ಷಣಗಳಲ್ಲಿ ವಿಕೆಟ್ ಪಡೆಯುವಲ್ಲಿ ನಿಪುಣರು. ಹಾಗೆ ಉತ್ತಮ ಆಟಗಾರ. ಟಿ 20 ವಿಶ್ವಕಪ್‌ನಲ್ಲಿ ಶಾರ್ದೂಲ್‌ಗೆ, ಭುವನೇಶ್ವರ್ ಸ್ಥಾನ ಪಡೆಯಲು ಸಾಧ್ಯವಿಲ್ಲ ಎನ್ನಲಾಗ್ತಿದೆ.
ಶಾರ್ದೂಲ್ ಠಾಕೂರ್, 22 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 22.29 ಸರಾಸರಿಯಲ್ಲಿ 31 ವಿಕೆಟ್ ಪಡೆದಿದ್ದಾರೆ. ಭುವನೇಶ್ವರ್ ಕುಮಾರ್, 51 ಟಿ-20 ಪಂದ್ಯಗಳಲ್ಲಿ, 25.10 ಸರಾಸರಿಯಲ್ಲಿ 50 ವಿಕೆಟ್ ಪಡೆದಿದ್ದಾರೆ. ಕಡಿಮೆ ರನ್ ನೀಡುವ ವಿಷ್ಯದಲ್ಲೂ ಭುವಿ, ಶಾರ್ದೂಲ್ ಗಿಂತ ಮುಂದಿದ್ದಾರೆ.
ಗಾಯದಿಂದ ಚೇತರಿಸಿಕೊಂಡ ನಂತರ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಭುವನೇಶ್ವರ್ ಕುಮಾರ್, ಉತ್ತಮ ಪ್ರದರ್ಶನ ನೀಡಿದ್ದರು. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 5 ವಿಕೆಟ್ ಪಡೆದಿದ್ದರು.