
ಉಡುಪಿ: ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಅರಿಶಿಣಗುಂಡಿ ಫಾಲ್ಸ್ ನಲ್ಲಿ ಜಾರಿ ಬಿದ್ದು, ನಾಪತ್ತೆಯಾಗಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶರತ್ ಮೃತದೇಹ ಪತ್ತೆಯಾಗಿದೆ.
ಜಾರಿ ಬಿದ್ದ ಸ್ಥಳದಿಂದ 200 ಮೀ. ದೂರದ ಮರದ ಪೊಟರೆ, ಬಂಡೆಯ ಸಂದಿಯಲ್ಲಿ ಶರತ್ ಮೃತದೇಹ ಕಂಡು ಬಂದಿದ್ದು, ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಶವವನ್ನು ಹೊರ ತೆಗೆದಿದ್ದು, ಅರಣ್ಯದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಶವ ಪರೀಕ್ಷೆಯ ಬಳಿಕ ಆಂಬುಲೆನ್ಸ್ ನಲ್ಲಿ ಶರತ್ ಮೃತದೇಹವನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿರುವ ನಿವಾಸಕ್ಕೆ ರವಾನೆ ಮಾಡಲಾಗಿದೆ. ಕಳೆದ ಭಾನುವಾರ ಜಲಪಾತದ ಬಂಡೆಯ ಬಳಿ ರೀಲ್ಸ್ ಮಾಡಲು ಹೋಗಿ ಶರತ್ ಜಾರಿ ಬಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು.