ನಾಳೆ ಬಿಡುಗಡೆಗೆ ಸಿದ್ಧವಾಗಿದೆ ಶರಣ್ ಅಭಿನಯದ ‘ಛೂ ಮಂತರ್’ 09-01-2025 6:32PM IST / No Comments / Posted In: Featured News, Live News, Entertainment ಕರ್ವ ನವನೀತ್ ಅವರ ನಿರ್ದೇಶನ ಹಾಗೂ ಸಂಕಲನವಿರುವ ‘ಛೂ ಮಂತರ್’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಭಯ ಭೀತಿ ನೀಡುವ ದೆವ್ವದ ಜೊತೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಲಿಸುವ ದೃಶ್ಯಗಳು ಈ ಸಿನಿಮಾದಲ್ಲಿದ್ದು, ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಶರಣ್ ಸೇರಿದಂತೆ ಮೇಘನಾ, ಅದಿತಿ ಪ್ರಭುದೇವ, ಚಿಕ್ಕಣ್ಣ, ಪ್ರಭು ಮುಂಡ್ಕೂರ್, ರಜಿನಿ ಭಾರದ್ವಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಮಾನಸ ತರುಣ್ ಮತ್ತು ತರುಣ್ ಶಿವಪ್ಪ ನಿರ್ಮಾಣ ಮಾಡಿದ್ದು, ಅವಿನಾಶ್ ಆರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಶ್ರೀ ಯೋಗನ್ ಸಂಭಾಷಣೆ, ಅನುಪ್ ಕಟ್ಟುಕರನ್ ಛಾಯಾಗ್ರಹಣವಿದೆ.