ಶನಿಯನ್ನು ನ್ಯಾಯ ದೇವತೆ ಎಂದು ಕರೆಯಲಾಗುತ್ತದೆ. ಶನಿ, ಜನರ ಕೆಲಸಕ್ಕೆ ತಕ್ಕಂತೆ ಫಲ ನೀಡುತ್ತಾನೆ. ಬಡವರಿಗೆ ಸಹಾಯ ಮಾಡುವ, ಕಷ್ಟಕ್ಕೆ ನೆರವಾಗುವ ಜನರಿಗೆ ಶನಿ ಆಶೀರ್ವಾದ ನೀಡುತ್ತಾನೆ. ಶನಿ ಕೂಡ ರಾಶಿ ಬದಲಿಸುತ್ತಿರುತ್ತಾನೆ. ಶನಿ ಇಂದು ಕುಂಭ ರಾಶಿಗೆ ಪ್ರತ್ಯಕ್ಷನಾಗಿದ್ದಾನೆ.
ಕುಂಭ ರಾಶಿಯಲ್ಲಿರುವ ಶನಿ 237 ದಿನಗಳ ಕಾಲ 5 ರಾಶಿಯವರಿಗೆ ಸ್ವಲ್ಪ ಕಷ್ಟಕೊಡಲಿದ್ದಾನೆ. ಕುಂಭ ಸೇರಿದಂತೆ ಮೀನ ಮತ್ತು ಮಕರ ರಾಶಿಯವರು ಸಾಡೇ ಸಾಥ್ ಶನಿ ಪಥದಲ್ಲಿದ್ದಾರೆ. ಇದಲ್ಲದೆ ವೃಶ್ಚಿಕ ರಾಶಿ ಮತ್ತು ಕರ್ಕಾಟಕ ರಾಶಿಯ ಜನರು ಶನಿಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಕುಂಭ, ಮೀನ, ಮಕರ, ವೃಶ್ಚಿಕ ಮತ್ತು ಕರ್ಕಾಟಕ ರಾಶಿ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಶನಿ ಜೀವಕ್ಕೆ ಹಾನಿ ಮಾಡುವುದಿಲ್ಲ. ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ. ಶನಿ ಸಮಸ್ಯೆಯಿದೆ ದೂರವಾಗಲು ಕೆಲ ಟಿಪ್ಸ್ ಪಾಲನೆ ಮಾಡಿದ್ರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ.
- ಸೂರ್ಯಾಸ್ತದ ಸಮಯದಲ್ಲಿ ಅಶ್ವತ್ಥ ಮರದ ಕೆಳಗೆ ದೀಪವನ್ನು ಹಚ್ಚಿ.
- ಶನಿ ದೇವಸ್ಥಾನದಲ್ಲಿ ಏಕಾಂತ ಸ್ಥಳದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.
- ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಪೂಜೆ ಮಾಡಿ ಏಳು ಪರಿಕ್ರಮವನ್ನು ಮಾಡಿ.
- ಇಂದಿನಿಂದ ಮುಂದಿನ 237 ದಿನಗಳವರೆಗೆ ಪ್ರತಿ ಶನಿವಾರ ಬೆಳಿಗ್ಗೆ ಸ್ನಾನ ಮಾಡಿ ಎಣ್ಣೆಯನ್ನು ದಾನ ಮಾಡಿ. ಅಗತ್ಯವಿರುವವರಿಗೆ ಎಣ್ಣೆಯನ್ನು ನೀಡಿದ್ರೆ ಸಮಸ್ಯೆ ಬಗೆಹರಿಯುತ್ತದೆ.
- ಪ್ರತಿ ಶನಿವಾರ ಹನುಮಾನ್ ಚಾಲೀಸಾ ಪಠಿಸಬೇಕು. ಹನುಮಂತನನ್ನು ಪೂಜಿಸಬೇಕು.