alex Certify ಧನ ತ್ರಯೋದಶಿ ದಿನ ಬದಲಾಗಲಿದೆ ಎಲ್ಲರ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧನ ತ್ರಯೋದಶಿ ದಿನ ಬದಲಾಗಲಿದೆ ಎಲ್ಲರ ಅದೃಷ್ಟ

ಶನಿ ಅಕ್ಟೋಬರ್ 23 ರಂದು ಸರಿಯಾದ ದಾರಿಯಲ್ಲಿ ಸಂಚಾರ ಶುರು ಮಾಡಲಿದ್ದಾನೆ. ಅಂದೇ ಧನ ತ್ರಯೋದಶಿ ಬಂದಿದೆ. ಧನ ತ್ರಯೋದಶಿ ಹಾಗೂ ಶನಿ ಚಲನೆ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಅದ್ರಲ್ಲೂ ಕೆಲ ರಾಶಿಗಳ ಅದೃಷ್ಟ ಬದಲಾಗಲಿದೆ. ಸುಖ ಪ್ರಾಪ್ತಿಯಾಗಲಿದೆ. ಅದೃಷ್ಟ ಒಲಿದು ಬರಲಿದೆ.

ಮೇಷ : ಶನಿಯ ಮಾರ್ಗ ಬದಲಾವಣೆ ನಂತ್ರ ಮೇಷ ರಾಶಿಯವರಿಗೆ ಒಳ್ಳೆಯ ಫಲ ಪ್ರಾಪ್ತಿಯಾಗಲಿದೆ. ಧನ ತ್ರಯೋದಶಿ ದಿನ ಶನಿ ಸರಿಯಾದ ಮಾರ್ಗದಲ್ಲಿ ಚಲಿಸುವುದ್ರಿಂದ ಮೇಷ ರಾಶಿಯವರಿಗೆ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ.

ಸಿಂಹ : ಶನಿ ಈ ಚಲನೆಯಿಂದ ಸಿಂಹ ರಾಶಿಗೆ ಲಾಭ ಸಿಗಲಿದೆ. ಸಿಂಹ ರಾಶಿಯವರಿಗೆ ವೃತ್ತಿಯಲ್ಲಿ ಹೊಸ ಅವಕಾಶ ಸಿಗಲಿದೆ. ಈ ಅವಧಿಯಲ್ಲಿ ಸಿಂಹ ರಾಶಿಯವರಿಗೆ ವೆಚ್ಚಗಳನ್ನು ನಿಯಂತ್ರಿಸುವ ಅವಶ್ಯಕತೆಯಿದೆ.

ತುಲಾ : ತುಲಾ ರಾಶಿಯ ಜನರಿಗೆ ಧನ ತ್ರಿಯೋದಶಿಯಂದು ಒಳ್ಳೆಯ ಸುದ್ದಿ ಸಿಗಲಿದೆ. ಶನಿ ಸರಿ ದಾರಿಯಲ್ಲಿ ಸಾಗುವುದ್ರಿಂದ ಹಠಾತ್ ಹಣಕಾಸಿನ ಲಾಭ ಸಿಗಲಿದೆ. ಧನ ತ್ರಯೋದಶಿಯಂದು ಚಿನ್ನವನ್ನು ಖರೀದಿಸುವುದು ಪ್ರಯೋಜನಕಾರಿಯಾಗಿದೆ.

ವೃಶ್ಚಿಕ : ಶನಿಯ ಮಾರ್ಗವು ವೃಶ್ಚಿಕ ರಾಶಿಯವರಿಗೆ ತುಂಬಾ ಮಂಗಳಕರವಾಗಿರಲಿದೆ. ಈ ರಾಶಿಯವರಿಗೆ ವಾಹನ ಸುಖ ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಸಹೋದರ ಸಹೋದರಿಯರಿಂದ ಬೆಂಬಲ ಸಿಗಲಿದೆ.

ಮೀನ ರಾಶಿ : ಮೀನ ರಾಶಿಯವರಿಗೆ ಧನ ತ್ರಯೋದಶಿಯಂದು  ಲಾಭ ಸಿಗಲಿದೆ. ವೃತ್ತಿ ಜೀವನದಲ್ಲಿ ಸುವರ್ಣ ಅವಕಾಶ ಸಿಗಲಿದೆ. ಶನಿಗ್ರಹದ ಶುಭ ಪರಿಣಾಮದಿಂದಾಗಿ ಸ್ಥಗಿತಗೊಂಡ ಕೆಲಸ ಪ್ರಾರಂಭವಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...