
ಶನಿ ದೇವರನ್ನು ನ್ಯಾಯ ದೇವರು ಎಂದು ಕರೆಯಲಾಗುತ್ತದೆ. ಶನಿ ವ್ಯಕ್ತಿಯ ಕೆಲಸಕ್ಕೆ ಅನುಗುಣವಾಗಿ ಶುಭ ಅಥವಾ ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಶನಿಯ ಕೆಟ್ಟ ದೃಷ್ಟಿ ವ್ಯಕ್ತಿ ಮೇಲೆ ಬಿದ್ದರೆ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಶನಿ ಕರುಣೆ ತೋರಿದ್ರೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಶನಿ ಎಂದೂ ಕೆಲ ವ್ಯಕ್ತಿಗಳಿಗೆ ಕರುಣೆ ತೋರುವುದಿಲ್ಲ.
ಯಾವುದೇ ಕಾರಣವಿಲ್ಲದೆ ಬಡವರು, ಅಸಹಾಯಕರು, ಮಹಿಳೆಯರು, ವೃದ್ಧರು ಮತ್ತು ನಿರ್ಗತಿಕರಿಗೆ ತೊಂದರೆ ನೀಡುವ ಜನರನ್ನು ಶನಿ ಎಂದೂ ಕ್ಷಮಿಸುವುದಿಲ್ಲ.
ಮೋಸ, ಸುಳ್ಳು ಮತ್ತು ನಿಂದೆ ಮಾಡುವವರಿಗೆ ಶನಿ ತೊಂದರೆ ಕೊಡುತ್ತಾನೆ. ಮೂಖ ಪ್ರಾಣಿಗಳಿಗೆ ಕಿರುಕುಳ ನೀಡುವ ಜನರನ್ನು ಶನಿ ಎಂದು ಕ್ಷಮಿಸುವುದಿಲ್ಲ.
ಸದಾ ಕೆಟ್ಟ ಕೆಲಸಗಳನ್ನು ಮಾಡುವವರ ಹಿಂದೆ ಬೀಳ್ತಾನೆ ಶನಿ. ಸಾಡೇ ಸಾಥ್ ಅಥವಾ ದೈಯಾ ರೂಪದಲ್ಲಿ ಕಿರುಕುಳ ನೀಡ್ತಾನೆ. ಉದ್ಯೋಗದಲ್ಲಿ ಸಮಸ್ಯೆ, ಆರ್ಥಿಕ ನಷ್ಟ ಉಂಟುಮಾಡ್ತಾನೆ.
ಶನಿಯನ್ನು ಒಲಿಸಿಕೊಳ್ಳಬೇಕೆಂದ್ರೆ ಕೆಲ ಉಪಾಯವನ್ನು ಮಾಡಿ :
ಶನಿವಾರದಂದು ಶನಿ ದೇವಸ್ಥಾನಕ್ಕೆ ಹೋಗಿ. ಶನಿ ವಿಗ್ರಹದ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಮತ್ತು ಸಾಸಿವೆ ಎಣ್ಣೆಯನ್ನು ಅರ್ಪಿಸಿ.
ಶನಿವಾರದಂದು ಶನಿ ದೇವಸ್ಥಾನಕ್ಕೆ ಹೋಗಿ ಶನಿ ಚಾಲೀಸವನ್ನು ಪಠಿಸಿ.
ಶನಿವಾರದಂದು ಹನುಮಾನ್ ಚಾಲೀಸಾವನ್ನು ಪಠಿಸುವುದು ಕೂಡ ಶನಿ ದೋಷವನ್ನು ತೊಡೆದುಹಾಕಲು ನೆರವಾಗುತ್ತದೆ.
ಶನಿ ದೋಷವನ್ನು ತೊಡೆದುಹಾಕಲು ಕರಿಬೇವು, ಕಪ್ಪು ಬಟ್ಟೆ, ಕಪ್ಪು ಎಳ್ಳು ಮತ್ತು ಕಾಳುಗಳಂತಹ ಕಪ್ಪು ವಸ್ತುಗಳನ್ನು ದಾನ ಮಾಡಬೇಕು.